Posts

Showing posts with the label ಅನುವಾದಿತ ಕಥೆ

ಅನುವಾದಿತ ಕಥೆ - “ಮೂರ್ಖ ಮತ್ತು ಮಹಾಮೂರ್ಖ”

Image
ಶಮಾ ಫತೇಹ್ ಅಲಿಯವರ ಹಿಂದಿ ಭಾಷೆಯ  “ ಮೂರ್ಖ ಮತ್ತು ಮಹಾಮೂರ್ಖ ”   ಕಥೆಯ   ಅನುವಾದ ]       1964 ರಲ್ಲಿ ಅಲಿಬಾಗ್ ‍ ನ ಸುತ್ತಮುತ್ತಲಿನ ಹೊಲಗಳಲ್ಲಿ ಅಡ್ಡಾಡುತ್ತಿರುವಾಗ ನಿಮಗೊಂದು ವಿಚಿತ್ರವಾದ ದೃಶ್ಯ ಕಾಣಸಿಗುತ್ತದೆ . ಕನ್ನಡಕ ಧರಿಸಿದ್ದ , ಅಚ್ಚಬಿಳಿ ಗಡ್ಡವಿದ್ದ ಸಣಕಲು ವೃದ್ಧನೊಬ್ಬ ಶಿಸ್ತಿನ ಸಿಪಾಯಿಯಂತೆ ಅತ್ತಿಂದಿತ್ತ , ಇತ್ತಿಂದತ್ತ ಪೆರೇಡ್ ಮಾಡುತ್ತಿದ್ದ . ಆತನ ಹಿಂದೆ ಚಿಕ್ಕಮಕ್ಕಳ ಒಂದು ಸೈನ್ಯ ಹೊರಟಿತ್ತು . ಆ ವ್ಯಕ್ತಿ ಥೇಟ್ ಜನರಲ್ ನಂತೆ ಆಗೊಮ್ಮೆ ಈಗೊಮ್ಮೆ ದುರ್ಬೀನು ಹಿಡಿದು ನಾಲ್ಕು ದಿಕ್ಕುಗಳಿಗೂ ದೃಷ್ಟಿ ಹಾಯಿಸುತ್ತಿದ್ದ .  ಅನಿಲ್ , ಹರೀಶ್ , ಅಹಮದ್ , ಶೀಲಾ ಮತ್ತು ಕಿರಣ್ , ರವಿ ಸಲೀಮ್ ಮಾಮುವಿನ ಹಿಂದೆ ಕರ್ತವ್ಯನಿಷ್ಠೆಯಿಂದ ಹೋಗುತ್ತಿದ್ದರಲ್ಲದೆ ಪ್ರಪಂಚದಲ್ಲೇ ಅತ್ಯುತ್ತಮವಾದ ಕಾರ್ಯವೊಂದನ್ನು ಮಾಡುತ್ತಿದ್ದೇವೆಂಬ ಗಾಂಭೀರ್ಯ ಎದ್ದುತೋರುತ್ತಿತ್ತು . ಗಿಡಗಳಲ್ಲಿ , ಪೊದೆಗಳಲ್ಲಿ ಇಣುಕುತ್ತಾ , ಏನೋ ಕಂಡಂವರಂತಾಗಿ , ಮರುಕ್ಷಣವೇ ದುರ್ಬೀನು ಕಸಿದುಕೊಂಡು ಕುತೂಹಲದಿಂದ ವೀಕ್ಷಿಸುತ್ತಿದ್ದರು .      ಅಲ್ಲೇ ಪಕ್ಕದ ಒಂದು   ಪೊದೆಯಿಂದ ಪಟಪಟ ಅಂತ ಹಕ್ಕಿಯೊಂದು ಹಾರಿಹೋಯಿತು . ಒಂದೇ ಸಮನೆ ಮಕ್ಕಳು ಅದರ ಹೆಸರನ್ನೇ ಕೂಗತೊಡ...