Posts

Showing posts with the label ಸಿನಿನೋಟ

ಸಿನಿನೋಟ - ಮುನ್ನುಡಿ

Image
ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಬಂಡಾಯ ಸಾಹಿತ್ಯವನ್ನಾಧರಿಸಿ ನಿರ್ಮಿಸಿದ ಅತ್ಯುತ್ತಮವಾದ ಚಲನಚಿತ್ರಗಳಲ್ಲಿ “ ಮುನ್ನುಡಿ ” ಎಂಬ ಚಲನಚಿತ್ರವೂ ಒಂದು . ಈ ಸಿನಿಮಾಗೆ ರಾಜ್ಯ ಪ್ರಶಸ್ತಿ ಬಂದಿದೆ . ಈ ಸಿನಿಮಾದಲ್ಲಿನ ರುಖಿಯಾಳ ಪಾತ್ರಕ್ಕಾಗಿ ‘ ತಾರ ' ರವರಿಗೆ ‘ ಅತ್ಯುತ್ತಮ ನಟಿ ’ ಎಂದು ರಾಷ್ಟ್ರ ಪ್ರಶಸ್ತಿ ದೊರೆಯಿತು . ಈ ಸಿನಿಮಾದ ನಿರ್ದೇಶಕರು ಪಿ . ಶೇಷಾದ್ರಿ . ಈ ಸಿನಿಮಾ ಕೇರಳದ ಮುತ್ತುಛೇರ ಎಂಬ ಕುಗ್ರಾಮದಲ್ಲಿ ಶೋಷಣೆಗೊಳಗಾದ ಹೆಣ್ಣುಮಕ್ಕಳ ನಿಜಜೀವನದ ಕಥೆಯನ್ನಾಧರಿಸಿದೆ . ಮುಸ್ಲಿಮರೇ ಪ್ರಮುಖರಾಗಿರುವ ಆ ಹಳ್ಳಿಯಲ್ಲಿ ಬಡತನ , ನಿರುದ್ಯೋಗ ತಾಂಡವವಾಡುತ್ತಿರುತ್ತದೆ . ಇಲ್ಲಿ ಒಬ್ಬ ಸಾಹುಕಾರ ಟಿಂಬರ್ ವ್ಯಾಪಾರಿಯಾಗಿದ್ದು ತನ್ನ ಮರದ ದಿಮ್ಮಿಗಳನ್ನು ಅರಬ್ಬೀ ದೇಶಕ್ಕೆ ಸಮುದ್ರದ ಮೂಲಕ ಸಾಗಿಸುತ್ತಾ ಇರುತ್ತಾನೆ . ಅರಬ್ಬಿಯಿಂದ ಬರುವ ವ್ಯಾಪಾರಿಗಳನ್ನು ಆಕರ್ಷಿಸಲು ಆ ಹಳ್ಳಿಯ ಬಡ ಹೆಣ್ಣುಮಕ್ಕಳನ್ನು ಜೀವನವನ್ನೇ ಪಣಕ್ಕಿಡುತ್ತಿರುತ್ತಾನೆ . ವ್ಯಾಪಾರಕ್ಕೆಂದು ಬೇರೆಡೆ ಹೋಗುವ ಮುಸ್ಲಿಮರು ತಾತ್ಕಾಲಿಕ ವಿವಾಹವನ್ನು ಮಾಡಿಕೊಳ್ಳುವ ಪದ್ಧತಿಯನ್ನು , ಅದರಿಂದ ಶೋಷಣೆಗೊಳಗಾಗುವ ಹೆಣ್ಣುಮಕ್ಕಳ ಚಿತ್ರಣವನ್ನು , ಅಂತಿಮವಾಗಿ ಆ ಹೆಣ್ಣುಮಕ್ಕಳೇ ಈ ಪದ್ಧತಿಯ ವಿರುದ್ಧ ಸಿಡಿದೇಳುವುದನ್ನು ಮನಮುಟ್ಟುವಂತೆ ಚಿತ್ರಿಸಲಾಗ...

ಸಿನಿನೋಟ - ಗಣಶತೃ

Image
ಆರು   ಹಾಡುಗಳು   ಮೂರು   ಫೈಟುಗಳು   ಸ್ವಲ್ಪ   ಮಸಾಲೆ   ಕೈಲಾಗದ   ಸುಂದರ   ( ಒಬ್ಬರಲ್ಲ   ಕನಿಷ್ಟ   ಮೂರು )  ನಾಯಕಿಯರು ,  ಅವರ   ರಕ್ಷಿಸುವ    ನಾಯಕನ   ಅಸಾಮಾನ್ಯ   ತಾಕತ್ತು   ಮತ್ತವನ   ಹುಚ್ಚು   ಆರಾಧನೆ ..... ಅಶ್ಲೀಲ   ಹಾಸ್ಯ  , ಮನ   ಘಾಸಿಗೊಳಿಸುವ   ಕ್ರೌರ್ಯ ,  ಇವಿಲ್ಲದೆ   ನಮ್ಮ    ಸಿನಿಮಾಗಳನ್ನ   ಊಹಿಸಲೂ   ಸಾಧ್ಯವಿಲ್ಲವೇನೊ ..... ಇದ್ದಲ್ಲಿ   ಅಂಥವು   ನೆಲಕಚ್ಚುವುದು   ಗ್ಯಾರಂಟಿ .... ಎಂಬ   ಈ   ಅಭಿಪ್ರಾಯವನ್ನು   ನೂರಕ್ಕೆ   ನೂರರಷ್ಟು   ತಪ್ಪೆಂದು   ತೋರಿಸಿದ   ಅನೇಕ   ಗಟ್ಟಿ   ನಿರ್ದೇಶಕರಲ್ಲಿ ಬಂಗಾಲಿ   ಸಿನಿಮಾಂತ್ರಿಕ  ....  ದಂತಕಥೆ ....  ಸತ್ಯಜಿತ್   ರೇರವರು   ಮುಂಚೂಣಿಯಲ್ಲಿರುತ್ತಾರೆ .  ಸಮಾಜದೆಡೆಗೆ   ಸಂವೇದನೆ   ಮತ್ತು   ಸೂಕ್ಷ್ಮ   ಗಮನ   ಹೊತ್ತ   ರೇ '  ರವರು   ಅದರ   ತೊಡಕುಗಳನ್ನು   ತಮ್ಮ   ವಿಶಿಷ್ಟ   ಪ್ರತಿಭೆಯಿಂದ   ಸರಳವಾಗಿ   ಚಿತ್ರಿಸಿ ...