Posts

Showing posts with the label ಶಿಕ್ಷಕಿಯ ಅನುಭವ

ಶಿಕ್ಷಕಿಯ ಅನುಭವ -1

Image
ಶಾಲೆಯೊಳಗೆ ಹೆಜ್ಜೆ ಇಟ್ಟಾಕ್ಷಣ ನನಗೆ ಬರುತ್ತಿದ್ದ ದೂರು ಮಾತ್ರ ಅವನದೇ . ಸುನಿಲ್ ಅಂತ ಹೆಸರು ಮೂರನೇ ತರಗತಿ ಓದ್ತಾ ಇದ್ದಾನೆ . ಮಿಸ್ ಸುನಿಲ್ ಹೊಡೆದ ಸುನಿಲ್ ಬೈದ ಸುನಿಲ್ ಅದನ್ನ ಮುರಿದ ಸುನಿಲ್ ಮಾತ್ರ home work ಬರೆದಿಲ್ಲ ... ಹೀಗೆ ತರಹೇವಾರಿ ಬೇಡದ ಕೆಲಸಗಳ ಸರದಾರ . ಅವನ ಮುಖ ಲಕ್ಷಣವೂ ಆಂಗಿಕ ಚಲನೆಯೂ ವಿಚಿತ್ರವೇ ತೀರ ವಯಸ್ಸಾದವನಂತೆ ಕಾಣುತ್ತಿದ್ದ .  ಮೊದಲಿಗೆ ಒಳ್ಳೆ ಮಾತಿನಲ್ಲಿ ಬೋಧನೆ . ನಂತರ ಕೋಪದಲ್ಲಿ ಎಚ್ಚರಿಕೆ , ಸಹನೆ ಮೀರಿ ಹೊಡೆತಗಳು ಬಿದ್ದವು . ಯಾವುದಕ್ಕೂ ಜಗ್ಗಲಿಲ್ಲ . ಸಮಸ್ಯೆಯಾಗಿಯೇ ಉಳಿದ . ಅವನ ಪೋಷಕರೊಂದಿಗೆ ಮಾತಾನಾಡುವುದು ಅಂತಿಮ ದಾರಿಯಾಗಿ ಕಂಡಿತು . ಕರೆಸಿದೆ . ತಾಯಿ ಬಂದಳು ಹುಟ್ಟು ಕುರುಡು . ತಾಯಿಗೆ ಮಗನ ಮೇಲೆ ಎಲ್ಲಿಲ್ಲದ ಭರವಸೆ . ಅವನು ಚೆನ್ನಾಗಿ ಓದಬೇಕೆಂಬುದು ಅವಳ ಆಸೆ . ಅವನ ಬಗ್ಗೆ ಹೇಳಿದ್ದಾಯಿತು . ಆಕೆ ಪೂರ್ತಿ ಜವಾಬ್ದಾರಿ ನನಗೇ ವಹಿಸಿದಳು . ನೀವು ಏನು ಮಾಡಿದರೂ ನಾ ಯಾಕೆ ಅಂತ ಕೇಳೋಲ್ಲ ಅವನ ತಿದ್ದುಕೊಡಿ ಅವನಪ್ಪ ಕುಡುಕ ನನಗೋ ಕುರುಡು ಎಂದು ನೊಂದುಕೊಂಡಳು . ಆಕೆಯ ಅರಿಕೆಗೆ ಮನಸ್ಸು ಚಿಂತೆಗೊಳಗಾಯಿತು . ಅವನ ಕೈಲಿ ಓದಿಸುವುದು ಈಗ ದೂರದ ಮಾತು . ತಕ್ಷಣಕ್ಕೆ ಅವನ ಕಾಡು ವರ್ತನೆ ನಿಲ್ಲಿಸಲು ಬಹಳ ಚಂತಿಸಿದೆ . ಅವನ ಬಗ್ಗೆ ಊರಲ್ಲಿ ವಿಚಾರಿಸ...

ಶಿಕ್ಷಕಿಯ ಅನುಭವ - 2

Image
ಅಂದು ಶನಿವಾರ . ಅನಿರೀಕ್ಷಿತವಾಗಿ ಎದುರಾದ ಸಮಸ್ಯೆಯೊಂದರಿಂದ ಅರ್ಧ ಗಂಟೆ ಶಾಲೆಗೆ ತಡವಾಗಿ ಹೋದೆ . ತಾಲ್ಲೂಕಿಗೆ ಹೊಸದಾಗಿ ಬಂದ ಬಿ . ಇ . ಓ ರವರು ಅಂದೇ ಕಾಯುತ್ತ ಕುಳಿತಿದ್ದರು . ಆ ದುರ್ವಿಧಿಗೆ ಶಪಿಸುತ್ತ ತರಗತಿಯೊಳಗೆ ಹೋದೆ . ನಿರೀಕ್ಷಿಸಿದಂತೆ ಅಧಿಕಾರಿಯ ದರ್ಪದ ಕೋಪದ ಮುಖಮುದ್ರೆ ದರ್ಶನವಾಯಿತು . ಮಕ್ಕಳ ಮುಂದೆ ಇರಿಸುಮುರುಸಾಯಿತು . ಆಗಲೇ ದನಿ ಹೊರಟಿತು " ಯಾಕ್ರಿ ಇಷ್ಟು ಲೇಟು ... ಮಕ್ಕಳು ಬಂದು ನಿಮಗೆ ಕಾಯಬೇಕಾ " ಎಂದರು . ನಿಂತ ನೆಲ ಕುಸಿದಂತೆ ಭಾಸವಾಯಿತು .  ನಾ ದಂಡಿಸುವ ಮಕ್ಕಳ ಮುಂದೆ ಅವರು ನನ್ನನ್ನು ದಂಡಿಸಿದುದು ಅರಗಿಸಿಕೊಳ್ಳಲಾಗಲಿಲ್ಲ . ಕಾರಣವನ್ನು ಕೇಳದೆ ದಿಢೀರೆಂದು ಆ ರೀತಿ ಪ್ರಶ್ನಿಸಿದ್ದು ಮನಕ್ಕೆ ಘಾಸಿಯಾಯಿತು . ನಂತರ ತಡವಾಗಿ ಬಂದದಕ್ಕೆ ಕ್ಷಮೆ ಕೇಳಿದೆ . ರೂಢಿಯಂತೆ ತಪಾಸಣೆ ಶುರುಮಾಡಿದರು , ಮಕ್ಕಳ ಕಲಿಕೆ ಪರೀಕ್ಷಿಸಿದರು . ಮಕ್ಕಳ ಉತ್ತರಗಳನ್ನು ಕೇಳಿ ಖುಷಿಯಾದರು . ಮಧ್ಯದಲ್ಲಿ ನಾನು ಅವರಿಗೆ ಟೀ ಬಿಸ್ಕತ್ ನೀಡಲು ಅಡುಗೆ ಮನೆಗೆ ಹೋದೆ . ಹಿಂದಿರುಗಿ ಬಂದಾಗ ಅವರ ಮುಖಭಾವ ಬದಲಾಗಿತ್ತು . ಟೀ ಕುಡಿದು ಹೊರಗೆ ಬಂದಾಗ ನಗುಮುಖದಿಂದ ಇದ್ದದ್ದನ್ನು ಕಂಡು ನಾನು ತಡವಾಗಿ ಬಂದುದಕ್ಕೆ ಹೆಣ್ಣುಮಕ್ಕಳ ಸಮಸ್ಯೆ ಕಾರಣವೆಂದು   ಹೇಳಿದೆ .  ಆಗ ಆ ಅಧಿಕಾರಿ “ ನನ್ನ ವರ್ತನೆಗೆ ...