Posts

Showing posts with the label ಅನುವಾದಿತ ಕವನ

ಅನುವಾದಿತ ಕವನ - ಲಿಂಕನ್‌ರವರ ಪತ್ರ

Image
ತಮ್ಮ ಮಗನ ಶಾಲಾ ಮುಖ್ಯೋಪಾಧ್ಯಾಯರಿಗೆ ಅಮೇರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ‌ ರವರ ಬರೆದಿದ್ದರೆನ್ನಲಾದ ಪತ್ರ ಗೌರವನೀಯ ಗುರುಗಳೇ , ನನಗೆ ಗೊತ್ತು , ನನ್ನ ಮಗ ಇದನು ಕಲಿಯಬೇಕೆಂದು - ಎಲ್ಲರೂ ಸತ್ಯವಂತರಲ್ಲವೆಂದು , ಎಲ್ಲರೂ ಪ್ರಾಮಾಣಿಕರಲ್ಲವೆಂದು ; ಆದರೆ ಅವನಿಗಿದನೂ ಕಲಿಸಿಕೊಡಿ - ಪ್ರತಿ ಠಕ್ಕನಿಗೋರ್ವ ಧೀರನಿರುವನೆಂದು , ಪ್ರತಿ ಸ್ವಾರ್ಥ ರಾಜಕಾರಣಿಗೋರ್ವ ನಿಸ್ವಾರ್ಥ ನಾಯಕನಿರುವನೆಂದು . ನನಗೆ ಗೊತ್ತು , ಇದಕೆ ಹೆಚ್ಚು ಸಮಯ ಬೇಕೆಂದು , ಆದರೂ ಕಲಿಸಿ ಅವನಿಗೆ - ದುಡಿದೊಂದು ರೂಪಾಯಿ , ದೊರೆತ ಐದಕ್ಕಿಂತ ಮಿಗಿಲೆಂದು . ಕಲಿಸಿ ಅವನಿಗೆ ಸೋಲುವುದನು , ಜೊತೆಗೆ ಜಯದಲಿ ಸುಖಿಸುವುದನು . ಸಾಧ್ಯವಾದರೆ ಕಲಿಸಿ ಅವನಿಗೆ ದೂರವಿರಿಸಲು ಅಸೂಯೆಯನು . ಸಾಧ್ಯವಾದರೆ ಕಲಿಸಿ ಅವನಿಗೆ ಮಂದಹಾಸದ ಮಹತ್ವವನು . ಕಲಿಯಲತಿ ಬೇಗ - ಪೀಡಕರನು ಸದೆಬಡಿವುದು ಸುಲಭವೆಂಬುದನು . ತಿಳಿಸಿರಿ ಅವನಿಗೆ , ಪುಸ್ತಕಲೋಕದ ವಿಸ್ಮಯವನು ; ಜೊತೆಗೆ , ಅರಿಯಲು ಕೊಡಿ ಸಮಯವನು - ಬಾನಂಗಳದ ಹಕ್ಕಿಗಳನು , ಹಗಲಿನ ದುಂಬಿಗಳನು , ಹಸಿರು ಬೆಟ್ಟದ ಸುಮಗಳ ನಿತ್ಯನೂತನ ಮರ್ಮವನು . ಕಲಿಸಿರಿ ಅವನಿಗೆ ಶಾಲೆಯಲಿ ವಂಚನೆಗಿಂತ ಫೇಲಾಗುವುದೇ ಮೇಲೆಂದು . ಎಲ್ಲರೂ ತಪ್ಪೆಂದರೂ , ತನ್ನ ವಿಚಾರಗಳಲಿ ದೃ...

ಅನುವಾದಿತ ಕವನ - ನಾನು ಹೆಣ್ಣು ಮಗಳೇನೆ

Image
[ ಈ   ಹಾಡು   ತೆಲುಗಿನಿಂದ   ಕನ್ನಡಕ್ಕೆ   ಅನುವಾದ   ಹಾಡು .  ಮಧುಪ್ರಿಯ   ಎಂಬ  13  ವರ್ಷದ   ಹೆಣ್ಣುಮಗಳು   ತಾನೇ   ಬರೆದು ,  ಹಾಡಿದ್ದಾಳೆ]   ಹೆಣ್ಣು   ಮಗಳಮ್ಮ   ನಾನು   ಹೆಣ್ಣು   ಮಗಳೇನೆ ನೋವ್ಯಾಕಮ್ಮ   ನಿನಗೆ   ಭಯವೇಕಮ್ಮ || ಅಷ್ಟಮಿಯ   ದಿನದಂದು,   ಅಮ್ಮ,   ಹುಟ್ಟಿದ   ಕಾರಣಕೆ ಈ   ಹಾಳು   ಲೋಕದಲಿ,   ಅಮ್ಮ,   ಕೀಳಾಗಿ   ಕಾಣುವರಾ ಹೆಣ್ಣೆಂದು   ಕೇಳುವರಾ ,  ಛೀ   ಎಂದು   ದೂಡುವರಾ ಅಷ್ಟಮಿಯ   ದಿನದಿ   ಹುಟ್ಟಿದ   ಕೃಷ್ಣಂಗೆ   ಪೂಜೆಯ   ಮಾಡುವರಾ ನನ್ನನ್ನು   ಕಸದಂತೆ   ನೋಡುವರಾ || ಪಾಟಿ   ಬಳಪ   ಹಿಡಿದು   ಅಮ್ಮ   ಶಾಲೆಗೆ   ನಾ   ಹೋದರೆ ಹೆಣ್ಣಾಗಿ   ಹುಟ್ಟಿದ್ದಕ್ಕೆ   ಅಮ್ಮ   ಓದ್ಯಾಕೆ   ಎನ್ನುವರಾ ಓದ್ಯಾಕೆ   ಎನ್ನುವರಾ   ಅಮ್ಮ   ಖರ್ಚೆಂದು   ಹೇಳುವರಾ ಓದಿನ   ತಾಯಿ   ಸರಸ್ವತಿಯು   ಹೆಣ್ಣಲ್ಲವೇನಮ್ಮ ನಂಗೇನೋ   ಓದ್ಯಾಕೆ   ಎನ್ನುವರಾ || ಬೆಳೆದಿರುವ   ...

ಅನುವಾದಿತ ಕವನ - ಆಕಾಶದಿ ಹಕ್ಕಿಯಾಗಿ

Image
ಅನಾಮಿಕ ( ವಾಟ್ಸಾಪ್ ನಲ್ಲಿ ಬಂದ ಒಂದು ಬರವಣಿಗೆಯ ಅನುವಾದ )                       ನಿಲ್ಲಿಸಿನ್ನ ಊದುವುದ   ಅದೇ ಕಿಲುಬು ಕಹಳೆಯ ' ಯಶಸ್ವಿಗನ ಹಿಂದೆ ಓರ್ವ ಸ್ತ್ರೀ ' ಎಂಬ ಬೊಗಳೆಯ ಇನ್ನಾದರೂ   ಪ್ರಶಂಸಿಸಿ   ಅವಳದೇ ಪ್ರಗತಿಯ ಹೆಣ್ಣು ಪುಣ್ಯತಾಯಿ ... .. ಮಹಾ ತ್ಯಾಗಮಯಿ ಎಂದು ಕಸಿದಿದ್ದು ಸಾಕಿನ್ನು ಇಳಿಸೆಲ್ಲವ ಭಾರವನ್ನು ಹಗುರಾಗಿಸಿ ಅವಳನ್ನು   ಅಂಗನೆ ನೀ ಅಂದಗಾತಿ   ಎಂಬ ಪದವ ಪಾಡದಿರಿ   ಅಂದವೆ ಪ್ರಧಾನವಲ್ಲ ವೆಂಬ ತತ್ವ ಸಾರಿರಿ ಅವ್ವ ಅಕ್ಕ ಮಡದಿ ಮಗಳ   ಪಾತ್ರವಿನ್ನು ಸಾಕು ಮಾಡಿ ಯಾರಿಗೂ ಅಧೀನಳಲ್ಲ   ಬಂಧಮುಕ್ತ ಪಟ್ಟ ನೀಡಿ ಹೆಣ್ಣಿಗಿದೆ , ಎಲ್ಲ ತೂಗಬಲ್ಲ ಶಕ್ತಿ ಈ ಹೊರೆಯಿಂದ   ಇನ್ನಾದರೂ ಕೊಡಿ ಮುಕ್ತಿ ದುಡಿಮೆ ಸಾಕು ವಿರಮಿಸಲಿ ನೀಡಿ ಅವಳ ಬಡ್ತಿ ನಿಮ್ಮ ಫಾಯದೆಗಾಗಿ ' ಪದ್ದತಿ ' ಯ ಹೆಸರಲ್ಲಿ ಉಸಿರುಗಟ್ಟಿಸಿದ್ದು ಸಾಕು ಏತಕಾಗಿ ಇರಬೇಕು ಅವಳಲ್ಲೆ ಪರಿಪೂರ್ಣತೆ ಅವಳಿಗೇನೆ ನೀತಿ ಕಥೆ ಇರಲಿ ಬಿಡಿ ಕಠಿಣತೆ ಬಿಟ್ಟುಬಿಡಲಿ ಸಹಿಷ್ಣುತೆ ಇನ್ನಾದರು ಕೊನೆಯಾಗಲಿ ಅನ್ಯರ ಆಶ್ರಯಿಸೊ ವ್ಯಥೆ ಕಳೆಯಲಿ ಕಾಲ ...