ಸ್ವಾನುಭವ - ಸ್ನೇಹ ಸಾಮರಸ್ಯ
ಗೆಳತಿ ಸಮೀನಾ ಮನೆಗೆ ಹೋಗಿದ್ದೆ ..... ಈ ಸ್ನೇಹ ತೀರ ಇತ್ತೀಚಿನದ್ದಾದರೂ ಮೊದಲ ಭೇಟಿಯಲ್ಲೆ ಸಮೀನಾ ಅದರಲ್ಲು ಅವರ ತಾಯಿಯ ನಿಷ್ಕಲ್ಮಶ ಪ್ರೇಮಕ್ಕೆ ಮನಸ್ಸು ಫಿದಾ ಆಗಿತ್ತು ...... ನನ್ನ ಮದುವೆ ನಿಶ್ಚಯದ ವಿಷಯ ಕೇಳಿ ಸ್ವಂತ ಮಗಳ ಮದುವೆಯೇನೊ ಎಂಬಂತೆ ಸಂತೋಷಪಟ್ಟರು . ತಿಂಡಿ ಪಾನಕಗಳಿಂದ ಉದರವನ್ನು , ಪ್ರೀತಿ ಮಮತೆಯಿಂದ ಹೃದಯವನ್ನು ತುಂಬಿದರು ..... ಹರಸಿದರು . ಅವರೊಂದಿಗೆ ಇದ್ದಷ್ಟು ಹೊತ್ತು ನನಗೆ ಕಂಡಿದ್ದು ಒಂದೇ ..... ಅವರ ಸರಳ ಸಹಜ ಪ್ರೀತಿ . ಅದು ಬಿಟ್ಟರೆ ಅವರ ಧರ್ಮ , ಬುರ್ಖಾ , ಕುಂಕುಮವಿರದ ಹಣೆ ಇವಾವುದು ಕಾಣಲೇ ಇಲ್ಲ . ಸಾಮರಸ್ಯ ಬೆಳೆಯಲು ಇದಕ್ಕಿಂತ ಹೆಚ್ಚಿನದೇನಿರಬೇಕೊ ತಿಳಿಯದು . ಈ ಸಮಯದಲ್ಲಿ ನನ್ನಜ್ಜಿ ಹೇಳಿದ ಕಥೆಯೊಂದು ಇಲ್ಲಿ ನೆನಪಾಗುತಿದೆ ಆಕೆ ಚಿಕ್ಕ ಹುಡುಗಿಯಾಗಿದ್ದಾಗ ದರ್ಗಾದಲ್ಲಿ ವರುಷಕ್ಕೊಮ್ಮೆ ನಡೆಯುವ ಉತ್ಸವದಲ್ಲಿ ಬಲು ಉತ್ಸಾಹದಿಂದ ಭಾಗವಹಿಸುತ್ತಿದ್ದರಂತೆ .... ಪವಿತ್ರಾಕ್ಷರಗಳ ಲೋಹಬಿಲ್ಲೆಗಳನ್ನು ಹೊತ್ತು ಊರೆಲ್ಲ ಸುತ್ತಾಡಿ ಅಗ್ನಿಕುಂಡದಲ್ಲಿ ಹಾಯುತ್ತಿದ್ದರಂತೆ ... ಹೀಗೊಂದು ದಿನ ನಮ್ಮಜ್ಜಿ ಹಂದಿ ಮಾಂಸವನ್ನು ತಿಂದು ಮಲಗಿದಾಗ ಕನಸಲ್ಲಿ ಆ ದೇವರು ಬಂದು ಕೆನ್ನೆಗೆ ಬಾರಿಸಿದ್ದರಂತೆ ( ಆಕೆಯ ಮನದ ಭಯ ಕನಸಾಗಿದೆಯೆಂದು ತಿಳಿಯದಷ್ಟು ಅಮಾಯಕತನ ) ಮರುದಿನವೇ ಅಜ್ಜಿ ದ...