Posts

Showing posts with the label ಮೇರು ವ್ಯಕ್ತಿತ್ವ

ಮೇರು ವ್ಯಕ್ತಿತ್ವ - ಮಹಾತ್ಮ ಜ್ಯೋತಿಭಾ ಫುಲೆ

Image
ಭಾರತೀಯ ಹಿಂದೂ ಪಾರಂಪರಿಕ ಧರ್ಮ ಇಂದೂ ಸಹ ಹೆಣ್ಣು ಗಂಡು ಎಂಬ ತಾರತಮ್ಯ ಹೊಂದಿರುವುದು ಎಲ್ಲರಿಗೂ ತಿಳಿದ ವಿಷಯವೇ . ಪರಿಸ್ಥಿತಿ 21 ನೇ ಶತಮಾನದಲ್ಲೂ ಹೀಗಿರುವಾಗ 19 ನೇ ಶತಮಾನದಲ್ಲಿ ಹೆಣ್ಣಿನ ಬಗ್ಗೆ ಸಮಾಜದ ಭಾವನೆ ಏನಿತ್ತು ಎಂಬುದನ್ನು ತಿಳಿಯುವುದೇನೂ ಕಷ್ಟವಲ್ಲ . ಸಮಾಜದಲ್ಲಿ ಪುರುಷರಿಗೆ ಹೆಚ್ಚು ಒತ್ತುಕೊಡಲಾಗಿತ್ತು . ಇದಕ್ಕೆ ಒತ್ತಾಸೆಯಾಗಿ ಪುರಾತನ ಧರ್ಮಗ್ರಂಥಗಳೂ ಅದನ್ನೇ ಸಾರಿ ಹೇಳುತ್ತಿದ್ದವು . ಸಮಾಜದಲ್ಲಿ ಲಿಂಗಭೇದ ಜಾತಿಬೇದ . ಹೀಗೆ ಹತ್ತಾರು ಸಾಮಾಜಿಕ ಜಾಡ್ಯಗಳಿಂದ ತುಂಬಿಹೋಗಿತ್ತು . ಇದಕ್ಕೆ ಅಂತ್ಯ ಹಾಡಿ ಕ್ರಾಂತಿ ಮಾಡುವ ವ್ಯಕ್ತಿಗಳು ಆ ನಿಟ್ಟಿನಲ್ಲಿ ತಮ್ಮದೇ ಕ್ರಾಂತಿಕಾರಿ ಮನೋಧರ್ಮದಿಂದ ಸಮಾಜದ ಅನಿಷ್ಟ ಪದ್ಧತಿಗಳಿಗೆ ಪೂರ್ಣ ವಿರಾಮವನ್ನಿಟ್ಟು , ಹೆಣ್ಣುಮಕ್ಕಳ ಸಮಾನತೆ , ಶಿಕ್ಷಣಕ್ಕಾಗಿ ಹೋರಾಡಿದರು .  ಅವರಲ್ಲಿ ಮಹಾತ್ಮ ಜ್ಯೋತಿಭಾ ಫುಲೆಯವರು ಮುಂಚೂಣಿಯಲ್ಲಿದ್ದಾರೆ . ಅವರು ಚಿಂತಕರು , ಸಮಾಜ ಸುಧಾರಕರು , ಕ್ರಿಯಾಶೀಲರು ಮತ್ತು ಕ್ರಾಂತಿಕಾರಿಗಳಾಗಿದ್ದರು . ಅವರ ಹೋರಾಟ ಎಲ್ಲಾ ಕ್ಷೇತ್ರಗಳಲ್ಲೂ ಹರಡಿತ್ತು , ಮುಖ್ಯವಾಗಿ ಶಿಕ್ಷಣ , ಕೃಷಿ , ಜಾತಿ ವ್ಯವಸ್ಥೆಯ ನಾಶ , ಸ್ತ್ರೀ ಮತ್ತು ವಿಧವೆಯರ ಏಳಿಗೆ ಮತ್ತು ಅಸ್ಪೃಶ್ಯತೆಯ ನಿರ್ಮೂಲನೆ . ತಾವೂ ಕೂಡ ಶೂದ್ರ ಮನೆತನದಲ್ಲಿ ಹುಟ್ಟಿ ಮೇಲ್ವರ್ಗದ...

ಮೇರು ವ್ಯಕ್ತಿತ್ವ - ಸಾವಿತ್ರಿಭಾಯಿ ಫುಲೆ

Image
ಇಂದು ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ತಾವು ಯಾರಿಗೇನೂ ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ . ಏಕೆಂದರೆ ಇಂದು ಹೆಣ್ಣು ಮಕ್ಕಳಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ . ಆದರೆ 19 ನೇ ಶತಮಾನದಲ್ಲಿ , ಹೆಣ್ಣೆಂದರೆ ನಾಲ್ಕು ಗೋಡೆಗಳ ಮಧ್ಯೆ ಕೊಳೆಯಬೇಕೆನ್ನುವ ಕಾಲದಲ್ಲಿ , ಚಿಕ್ಕ ವಯಸ್ಸಿಗೆ ಮದುವೆಯಾಗಿ , ಮುದಿಗಂಡ ತೀರಿಕೊಂಡ ನಂತರ ತಲೆ ಬೋಳಿಸಿಕೊಂಡು , ಆಡುವ ವಯಸ್ಸಿನಲ್ಲಿ ರುಚಿ , ರಂಜನೆ , ಅಲಂಕಾರ , ವಿಹಾರ , ನಗು ಎಲ್ಲ ಮರೆತು ಮೂಲೆಯಲ್ಲಿ ಕೂರುತ್ತಿದ್ದ ಕಾಲದಲ್ಲಿ , ವಿಧವೆಯರು ಪುರುಷರ ವಿಕೃತಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ , ಬೀದಿಯಲ್ಲಿ ನಡೆದರೆ ಅಪವಿತ್ರವಾಗುವುದೆಂದು ಅಸ್ಪೃಶ್ಯರೆನಿಸಿಕೊಂಡ ಮಹಿಳೆಯರು ತಮ್ಮ ಸೊಂಟಕ್ಕೆ ಮರದ ಕೊಂಬೆಗಳನ್ನು ಕಟ್ಟಿಕೊಂಡು ನಡೆಯುತ್ತಿದ್ದ ಕಾಲದಲ್ಲಿ , ಅದನ್ನೆಲ್ಲಾ ಮೀರಿ , ಓದಿ , ವಿದ್ಯಾವಂತರಾಗಿ , ಮೊದಲ ಬಾರಿಗೆ ಶಾಲೆ ತೆರೆದು , ಶಿಕ್ಷಕಿಯಾಗಿ ಕೆಲಸಮಾಡಿದ ಸಾವಿತ್ರಿಭಾಯಿ ಫುಲೆಯವರ ಸಾಧನೆ ಮಹೋನ್ನತವಾದದ್ದು . ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ನೈಗಮ್ ಎಂಬ ಗ್ರಾಮದಲ್ಲಿ 1831 ರ ಜನವರಿ 3 ರಂದು ರೈತರ ಕುಟುಂಬವೊಂದರಲ್ಲಿ ಅವರು ಜನಿಸಿದರು . 9 ನೇ ವಯಸ್ಸಿನಲ್ಲಿ ಜ್ಯೋತಿಭಾ ಫುಲೆಯವರೊಂದಿಗೆ ಇವರ ವಿವಾಹವಾಯಿತು . ನಂತರದ ದಿನಗಳಲ್ಲಿ...