ಚುಟುಕಗಳು -
ಚುಟುಕ - ೧
ದಟ್ಟಡವಿಯ
ಮೌನ
ಘೋರ
ಝೇಂಕಾರ
ಅಗಾಧ ಸಾಗರ
ಮೌನ
ಕ್ರೂರ
ಸುಂದರ
ಏರುಪರ್ವತದ
ಮೌನ
ಕಠೋರ
ಗಂಭೀರ
ಮೌನ
ಕೋಮಲವೂ
ಮೌನ
ಕಾಠಿಣ್ಯವೂ
ಚುಟುಕ - ೨
ನಿಸರ್ಗ
ಸೌಂದರ್ಯಕೆ
ನಾನು
ಸದಾ ದಾಸ
ಅದಕೆ
ಪ್ರವಾಸ
ನನ್ನ ಹವ್ಯಾಸ
ಕಾಡು
ಬೆಟ್ಟ ರೋಹಣಕೆ
ಬಾಯಸುವೆನು
ಮನಸಾ
ಇದಕೆ
ಇರಬೇಕು
ಧೈರ್ಯಸಾಹಸ
ಚುಟುಕ - ೩
ಹೊಂಗೆ
ಹೂವ ಸುರಿಯುತಲೆ
ಚಿಗುರು
ತಂಪುನೀಡುತಿರೆ
ಕಹಿ
ಸಿಹಿಯೊಳಿಟ್ಟು ತಿನುವ ಕಲೆ
ಬಾಳ
ಗುಟ್ಟು ತಿಳಿ ಎನುತಲೆ
ನಮಯುಗಾದಿ
ನವಯುಗಾದಿ
ಮತ್ತೆ
ಮರಳಿ ಬಂದಿತಲೆ
Comments
Post a Comment