ಅನುವಾದಿತ ಕವನ - ನಾನು ಹೆಣ್ಣು ಮಗಳೇನೆ


[ ಹಾಡು ತೆಲುಗಿನಿಂದ ಕನ್ನಡಕ್ಕೆ ಅನುವಾದ ಹಾಡುಮಧುಪ್ರಿಯ ಎಂಬ 13 ವರ್ಷದ ಹೆಣ್ಣುಮಗಳು ತಾನೇ ಬರೆದುಹಾಡಿದ್ದಾಳೆ] 


ಹೆಣ್ಣು ಮಗಳಮ್ಮ ನಾನು ಹೆಣ್ಣು ಮಗಳೇನೆ
ನೋವ್ಯಾಕಮ್ಮ ನಿನಗೆ ಭಯವೇಕಮ್ಮ||

ಅಷ್ಟಮಿಯ ದಿನದಂದು, ಅಮ್ಮ, ಹುಟ್ಟಿದ ಕಾರಣಕೆ
 ಹಾಳು ಲೋಕದಲಿ, ಅಮ್ಮ, ಕೀಳಾಗಿ ಕಾಣುವರಾ
ಹೆಣ್ಣೆಂದು ಕೇಳುವರಾಛೀ ಎಂದು ದೂಡುವರಾ
ಅಷ್ಟಮಿಯ ದಿನದಿ ಹುಟ್ಟಿದ ಕೃಷ್ಣಂಗೆ ಪೂಜೆಯ ಮಾಡುವರಾ
ನನ್ನನ್ನು ಕಸದಂತೆ ನೋಡುವರಾ||

ಪಾಟಿ ಬಳಪ ಹಿಡಿದು ಅಮ್ಮ ಶಾಲೆಗೆ ನಾ ಹೋದರೆ
ಹೆಣ್ಣಾಗಿ ಹುಟ್ಟಿದ್ದಕ್ಕೆ ಅಮ್ಮ ಓದ್ಯಾಕೆ ಎನ್ನುವರಾ
ಓದ್ಯಾಕೆ ಎನ್ನುವರಾ ಅಮ್ಮ ಖರ್ಚೆಂದು ಹೇಳುವರಾ
ಓದಿನ ತಾಯಿ ಸರಸ್ವತಿಯು ಹೆಣ್ಣಲ್ಲವೇನಮ್ಮ
ನಂಗೇನೋ ಓದ್ಯಾಕೆ ಎನ್ನುವರಾ||

ಬೆಳೆದಿರುವ ನನ್ನ ನೋಡಿ ಅಮ್ಮ ನೀನ್ಯಾಕೆ ಅಳುತೀಯೆ
ಲಕ್ಷ ವರದಕ್ಷಿಣೆಯ ಅಮ್ಮ ಎಲ್ಲಿಂದ ಕೊಡಲೆಂದು
ಹೆಣ್ಣೆಂದು ತಿಳಿದಾ ಕ್ಷಣವೇ ಭ್ರೂಣ ತೆಗೆಸುವರೇಕಮ್ಮ
ಹೆಣ್ಣು ಮಕ್ಕಳೇ ಬೇಡೆಂದುಕೊಂಡರೆ ಸೃಷ್ಟಿಗೆ ಮೂಲವೆಲ್ಲಿ
ನಾಳೆಯ ಜಗಕೆ ದಾರಿಯೆಲ್ಲಿ||

ಅನುವಾದ - ಉಷಾಗಂಗೆ 


Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -