ಕವನ - ನಿರ್ಭಯಾ
ನಿರ್ಭಯಾ ಘಟನೆಗೆ ತಲ್ಲಣಿಸಿದ ಮನ ರಾತ್ರಿಯೆಲ್ಲ ನಿದ್ದೆ ದೂರಾಗಿ ಒದ್ದಾಡುತಿರುವಾಗ ಆ ತುಮುಲಗಳನ್ನೆಲ್ಲ ಹೊರಹಾಕಿದ ಪ್ರಯತ್ನವೇ ಈ ಕವನ , ನೊಂದ ಹೆಣ್ಣುಮಕ್ಕಳ ಆತ್ಮಗಳಿಗೆ ಅಂಕಿತ ಈ ಪದ್ಯ , ಹೋರಾಡುವ ಮನಗಳಿಗೆ ಅರ್ಪಣೆ ಈ ಕವನ ... ದಾರುಣವದು ದುರ್ದಿನದಲಿ ದಾಂಡಿಗರ ದಾಂಧಲೆಯಲಿ ಧ್ವಂಸಳಾದೆ ದಯೆತೋರದ ದುಷ್ಟ ಜನರ ಧರೆಯಲಿ ನೆತ್ತರಿನ ಮಡುವಿನಲಿ ನೆಂದು ಹೋದರೂ ನೀನು ನಂದಲಿಲ್ಲ ನಂಬಿಕಾಗ್ನಿ ನರಳುತಿದ್ದರೂನು ದೇಶವಿಡೀ ಕಂಪಿಸಿ ದುರಂತಕಾಗಿ ದುಃಖಿಸಿ ದಾಮಿನಿಯರ ದುರ್ಗತಿಯ ದಾರಿಯನ್ನು ಅಳಿಸಿ ಎಂದು ಬದುಕ ಬಯಸಿದೆ ನೀನು ಛಲದಿ ಸಹಿಸಿದೆ ಇಂದು ನಾಳೆ ಎಂದಾದರೂ ಗೆಲುವೆ ಎಂದೆಣಿಸಿದೆ ಆ ದುರುಳರ ದಮನವಿನ್ನು ದೂರದಲ್ಲಿ ಇಲ್ಲವೆಂದು ಧೂರ್ತರಿಗೆ ದಂಡವಂತು ದೊರಕದಿರುವುದಿಲ್ಲವೆಂದು ದಿನವು ದೂಡಿದೆ ನೀನು ದಾರಿ ನೋಡಿದೆ ಮತ್ತೇಕೆ ಮೌನವಾದೆ ನಮ್ಮನೇಕೆ ದೂಡಿ ಹೋದೆ ಓ ಗೆಳತಿ ಈ ಅಂತ್ಯವು ಮುಗಿದಾ ಕಥೆಯಲ್ಲ ಮೌನ ವಹಿಸಿ ಸ...