ಕವನ - ರಟ್ಟೇಲಿನ್ನು ಕಸುವೈತೆ




ಹುಟ್ಟಾಕಿಲ್ಲ ....ಅಪ್ಪ
ಹೆಣ್ಣೆಂದು ಕೊಟ್ಬಿಟ್ಟ

ಕಟ್ಕೊಂಡೋನು
ದುಡಿಯೋ ಎತ್ತಂಗೆ ನೋಡ್ಬಿಟ್ಟ

ಹುಟ್ದೋನು
ಮೊಮ್ಮಕ್ಕಳ ಸಾಕಕ್ಕೆ ಇರಲಿ ಅಂದ್ಬಿಟ್ಟ

ಮನ್ಸು ಕಲ್ಲಾಗೈತೆ
ರಟ್ಟೇಲಿನ್ನು ಕಸುವೈತೆ

ಬಂದದ್ದೆ ದಾರಿ....ಹೋಗ್ತಿರ್ತೀನಿ
- ಉಷಾಗಂಗೆ 


Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -