ಅನುವಾದಿತ ಕವನ - ಕೋಮಲೆಯೇ ನೀನಲ್ಲ ಅಬಲೆ


(ಹಿಂದಿ ಚಿತ್ರ  ಕೋಮಲ್ ಗೀತೆಯೊಂದರ ಅನುವಾದ)

ಕೋಮಲೆಯೇ ನೀನಲ್ಲ ಅಬಲೆ
ಶಕ್ತಿಯ ರೂಪವು ನಿನ್ನಲ್ಲೇ
ಜಗಕೆ ಜೀವವ ನೀಡುವ ಹೆಣ್ಣೆ
ಮೃತ್ಯುವನೆ ನೀ ಜಯಿಸಿರುವೆ

ಸತಿಸಹಗಮನದಿ ನಿನ್ನಾ ದಹನ
ಮೀರಾ ಹೆಸರಲಿ ವಿಷಪ್ರಾಶಾನ
ಸೀತೆಗೆ ನೀಡಿದ ಅಗ್ನಿಪರೀಕ್ಷೆ
ಇಂದಿಗೂ ನಿನಗದು ತಪ್ಪದ ಶಿಕ್ಷೆ

ಕಲೆಸಾಹಿತ್ಯದಿ ಮಮತೆ ಮತಿಯಲಿ
ಸಕಲ ಕ್ಷೇತ್ರದಲಿ ಮುಂದಿರುವೆ
ಪುರುಷರೆ ಎಲ್ಲೆಡೆ ತುಂಬಿರಲಿ
ನೀ ನಾಯಕಿಯಾಗು ಎಲ್ಲರಲೀ

ಇನ್ನಾದರೂ ನೀ ಸಹಿಸದಿರು
ಬದಲಿಸು ನೀ ಇತಿಹಾಸವನು
ಸಂಕಲೆಯನು ಧಿಕ್ಕರಿಸಿಂದು
ದೃಢನಿಶ್ಚಯದಿ ನೀ ನಡೆ ಮುಂದು

Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -