ತಮ್ಮ ಮಗನ ಶಾಲಾ ಮುಖ್ಯೋಪಾಧ್ಯಾಯರಿಗೆ ಅಮೇರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ರವರ ಬರೆದಿದ್ದರೆನ್ನಲಾದ ಪತ್ರ ಗೌರವನೀಯ ಗುರುಗಳೇ , ನನಗೆ ಗೊತ್ತು , ನನ್ನ ಮಗ ಇದನು ಕಲಿಯಬೇಕೆಂದು - ಎಲ್ಲರೂ ಸತ್ಯವಂತರಲ್ಲವೆಂದು , ಎಲ್ಲರೂ ಪ್ರಾಮಾಣಿಕರಲ್ಲವೆಂದು ; ಆದರೆ ಅವನಿಗಿದನೂ ಕಲಿಸಿಕೊಡಿ - ಪ್ರತಿ ಠಕ್ಕನಿಗೋರ್ವ ಧೀರನಿರುವನೆಂದು , ಪ್ರತಿ ಸ್ವಾರ್ಥ ರಾಜಕಾರಣಿಗೋರ್ವ ನಿಸ್ವಾರ್ಥ ನಾಯಕನಿರುವನೆಂದು . ನನಗೆ ಗೊತ್ತು , ಇದಕೆ ಹೆಚ್ಚು ಸಮಯ ಬೇಕೆಂದು , ಆದರೂ ಕಲಿಸಿ ಅವನಿಗೆ - ದುಡಿದೊಂದು ರೂಪಾಯಿ , ದೊರೆತ ಐದಕ್ಕಿಂತ ಮಿಗಿಲೆಂದು . ಕಲಿಸಿ ಅವನಿಗೆ ಸೋಲುವುದನು , ಜೊತೆಗೆ ಜಯದಲಿ ಸುಖಿಸುವುದನು . ಸಾಧ್ಯವಾದರೆ ಕಲಿಸಿ ಅವನಿಗೆ ದೂರವಿರಿಸಲು ಅಸೂಯೆಯನು . ಸಾಧ್ಯವಾದರೆ ಕಲಿಸಿ ಅವನಿಗೆ ಮಂದಹಾಸದ ಮಹತ್ವವನು . ಕಲಿಯಲತಿ ಬೇಗ - ಪೀಡಕರನು ಸದೆಬಡಿವುದು ಸುಲಭವೆಂಬುದನು . ತಿಳಿಸಿರಿ ಅವನಿಗೆ , ಪುಸ್ತಕಲೋಕದ ವಿಸ್ಮಯವನು ; ಜೊತೆಗೆ , ಅರಿಯಲು ಕೊಡಿ ಸಮಯವನು - ಬಾನಂಗಳದ ಹಕ್ಕಿಗಳನು , ಹಗಲಿನ ದುಂಬಿಗಳನು , ಹಸಿರು ಬೆಟ್ಟದ ಸುಮಗಳ ನಿತ್ಯನೂತನ ಮರ್ಮವನು . ಕಲಿಸಿರಿ ಅವನಿಗೆ ಶಾಲೆಯಲಿ ವಂಚನೆಗಿಂತ ಫೇಲಾಗುವುದೇ ಮೇಲೆಂದು . ಎಲ್ಲರೂ ತಪ್ಪೆಂದರೂ , ತನ್ನ ವಿಚಾರಗಳಲಿ ದೃ...
ನೀನೆಂದರೆ ಬಿಸಿ ನೆತ್ತರ ಧಗೆಯು ನೀನಲ್ಲವೆ ಬಿರುಗಾಳಿಯ ವೇಗವು ನೀನಾದೆ ಬ್ರಿಟಿಷರಿಗೆ ಸಿಂಹಸ್ವಪ್ನವು ನೀನೇ ಯುವಬಲದ ಮೂಲಾರ್ಥವು . ಕಡೆಗಣಿಸಿ ನಿನ್ನವರ ಧುಮುಕಿದೆ ಸ್ವಾತಂತ್ರ್ಯವನ್ನರಸಿ ಕ್ಷಣಕ್ಷಣವು ಪರಿತಪಿಸಿದೆ ದೌರ್ಜನ್ಯವ ನೆನೆಸಿ ದಬ್ಬಾಳಿಕೆಯೆದುರು ಅಬ್ಬರಿಸಿ ಹೆಬ್ಬುಲಿಯಾದೆ ಯುವಶಕ್ತಿಯನೆಚ್ಚರಿಸಿ ನೀ ಅಮರನಾದೆ . ಅರ್ಥಪೂರ್ಣ ನೀನು ಬದುಕಿದ ರೀತಿ , ಅಮೂಲ್ಯ ನಿನ್ನ ದೇಶಪ್ರೀತಿ , ಅಮೋಘ ನಿನ್ನ ಸಾಹಸವೃತ್ತಿ , ಅಪರೂಪ ನಿನ್ನ ಮಾನವಪ್ರೀತಿ . ಆದರೆ , ಮರೆತೇಹೋಗಿದೆ ಮರೆಯಾಗಿಯೇ ಹೋಗಿದೆ ಆ ಬಲಿದಾನ , ಅಳಿಸಿ ಹೋಗಿದೆ ಅರಿವಿನಲ್ಲಿರದಾಗಿದೆ ಆ ರಕ್ತದಾನ , ಮತ್ತಿನಲ್ಲಿದೆ ಮಾದಕತೆಯಲ್ಲಿ ಮುಳುಗಿದೆ ಈ ಯುವಜನ . ಜಡವ ತೊಲಗಿಸಲಿ ಜನರಲ್ಲಿ ನಿನ್ನ ನೆನಪು ಭಯವೇ ಬೆದರೋಡಲಿ ನೆನೆದಾಗ ನಿನ್ನ ಬದುಕು ಉತ್ಸಾಹವನುಕ್ಕಿಸಲಿ ನಿನ್ನ ಉಕ್ಕಿನೋಕ್ತಿಗಳು ಆವೇಶವನ್ನೆಬ್ಬಿಸಲಿ ನಿನ್ನ ಘೋಷಗಳು .
ಚುಟುಕ - ೧ ದಟ್ಟಡವಿಯ ಮೌನ ಘೋರ ಝೇಂಕಾರ ಅಗಾಧ ಸಾಗರ ಮೌನ ಕ್ರೂರ ಸುಂದರ ಏರುಪರ್ವತದ ಮೌನ ಕಠೋರ ಗಂಭೀರ ಮೌನ ಕೋಮಲವೂ ಮೌನ ಕಾಠಿಣ್ಯವೂ ಚುಟುಕ - ೨ ನಿಸರ್ಗ ಸೌಂದರ್ಯಕೆ ನಾನು ಸದಾ ದಾಸ ಅದಕೆ ಪ್ರವಾಸ ನನ್ನ ಹವ್ಯಾಸ ಕಾಡು ಬೆಟ್ಟ ರೋಹಣಕೆ ಬಾಯಸುವೆನು ಮನಸಾ ಇದಕೆ ಇರಬೇಕು ಧೈರ್ಯಸಾಹಸ ಚುಟುಕ - ೩ ಹೊಂಗೆ ಹೂವ ಸುರಿಯುತಲೆ ಚಿಗುರು ತಂಪುನೀಡುತಿರೆ ಕಹಿ ಸಿಹಿಯೊಳಿಟ್ಟು ತಿನುವ ಕಲೆ ಬಾಳ ಗುಟ್ಟು ತಿಳಿ ಎನುತಲೆ ನಮಯುಗಾದಿ ನವಯುಗಾದಿ ಮತ್ತೆ ಮರಳಿ ಬಂದಿತಲೆ
Comments
Post a Comment