ಕವನ - ಕಿತ್ತೂರಿನ ಚೆನ್ನಮ್ಮ


ಕೆಚ್ಚೆದೆಯ ಕಲಿಹೆಣ್ಣು
ಕಿತ್ತೂರಿನ ಚೆನ್ನಮ್ಮ

ಕಿತ್ತುಕೊಳ್ಳಲಿಕ್ಕೆ ಬಂದ
ಕಿಡಿಗೇಡಿಯ ಕಡಿಯಲಿಕ್ಕೆ

ಕತ್ತಿಯನ್ನ ಕೈಯಲಿಡಿದು
ಕಾಳಗದಲಿ ಕಾದಾಡಿ

ಕುತಂತ್ರಿಯ ಕುದ್ರೋಹಕೆ
ಕೆಳಗುರುಳಿ ಕೊಸರಾಡಿ

ಕೊನೆಗೂ ಕಿತ್ತೂರನ್ನು
ಕಳೆದುಕೊಂಡೆವೆಂದು 

ಕನ್ನಡಕಲಿಕುಲಕನ್ಯೆಯು,
ಕಣ್ಮಣಿಯು ಕಾಪಿಡುತ್ತ

ಕಾರಾಗೃಹದಲೇ
ಕೊರಗುತ್ತಾ ಕಣ್ಮುಚ್ಚಿದಳು

Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -