ಕವನ - ಸಾಮರಸ್ಯ ಬೇಡವೇ



ಜತೆಯಲೇ ಬೆಳದವರಿಗೆ 
ಜಾತಿಹುಚ್ಚೇತಕೊ
ಮಣ್ಣಲ್ಲಾಡಿದವರು 
ಮಡಿ ಮಾಡುವರೇಕೊ
ಕಾಗೆ ಎಂಜಿಲ ತಿಂದು 
ಕುಲದ ಮೋಹವೇಕೊ

ಮಸೀದಿ ಸಕ್ಕರೆ ಕಡಲೆ 
ಚರ್ಚಿನ ಸಿಹಿರೊಟ್ಟಿ
ಗುಡಿಯ ಪಂಚಾಮೃತಕ್ಕೆ  
ಹಾತೊರೆಯುತ್ತಿದ್ದವರು
ಕೋಮುಕಾಳಸರ್ಪದ ವಿಷ
ಹತ್ತಿಸಿಕೊಂಡರೇಕೊ

Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -