ಕವನ - ದೂರುತ್ತ ಕಾಲ ಕಳೀಬೇಡಿ




ಅಡುಗೆ ಮನೆಗೆ ಹೆಣ್ಣು ಮಾತ್ರ ಮೀಸಲಾ
ನಳಪಾಕ ನಮದು ಎಂದೆ ಬೀಗುತ್ತೀರಲ್ಲ
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
ಕಾಲಧರ್ಮವನ್ನು ಯಾರು ತಡೆಯೋರು

ನಿಮ್ಮ ಕೆಲಸಾನ ನೀವೆ ಮಾಡ್ಕೊಳ್ಳಿ
ಇಲ್ದಿದ್ರೆ ಉಪವಾಸ ವನವಾಸ ರೀ
ಹಾಡುತ್ತ ದೂರುತ್ತ ಸುಮ್ನೆ ಕಾಲ ಕಳೀಬೇಡಿ

ಫೋನು ಹಿಡಿದು ಲೀನವಾದ್ರೆ ನೀವು
ಫ್ಯಾನು ಹಾಕಿ ತಿನಿಸಿ ತೊಳಿಬೇಕೇನು
ಬೈಕಿನಲ್ಲಿ  ಸುತ್ತಿ ಬಂದ್ರೆ ನೀವು
ಸ್ಲೈಸು ನೀಡಿ ಪಾದ ಒತ್ತಬೇಕೇನು

ಫ್ರೆಂಡ್ಸು ಕ್ರಿಕೆಟ್ಟು ಎಲ್ಲಾನು ಬಿಟ್ಟು
ಮನೆ ಕಡೆ ನೋಡಿ ಸ್ವಲ್ಪ ಕಣ್ಬಿಟ್ಟು
ಇಲ್ಲಾಂದ್ರೆ ಕಾದಿದೆ ಎಡವಟ್ಟು

ಹೆಣ್ಣುಹೊರಗೂ ಒಳಗೂ ದುಡಿದೂ ದುಡಿದೂ
ಮೋಜು ನಿಮ್ಮದು ಕುಡಿದು ಕುಡಿದೂ
ಕಡಿದು ಕಟ್ಟೆಹಾಕೋದು ಏನಿಲ್ಲ ನಿಮ್ದು

ಒಲೆಯ ಭೋಜನ ಬಯಸುವ ನೀವು
ಒರಳುರುಬ್ಬಿ ಕೊಡಿ ನಷ್ಟವೇನು
ಪೂಜೆ ಭಜನೆ ನಿತ್ಯ ಬೇಕೇನು
ಪಾತ್ರೆ ಉಜ್ಜಿ ನೆಲವ ಒರೆಸಿ ತಪ್ಪೇನು

ಆಚಾರ ವಿಚಾರ ಹೆಣ್ಣೊಬ್ಬಳಿಗಲ್ಲ
ಸಂಗೀತ ಸಾಹಿತ್ಯಕೆ ಬಿಡುವೇ ಇಲ್ಲ
ನಿಮ್ಮಂತೆ ಅವಳೂನು 
ಹತ್ತು ತಲೆಕೈಗಳಿಲ್ಲ


Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -