ಕವನ - ವಾಟ್ಸಾಪ್ ಒಂದು ಜಾಡ್ಯಾನಾ




ನಿಮಗೂ ಹೀಗೆ ಉಂಟೇನಾ
ವಾಟ್ಸಾಪ್ ಅಂಟು ಜಾಡ್ಯಾನ
ಕ್ಷಣವೂ ಬಿಟ್ಟಿರೆ ಫೋನನು ನಾ
ಕೇಳಲೇಬೇಕು ಬೀಪ್ ಸದ್ದನ್ನ

ಎಲ್ಲೆ ಇದ್ದರೂ ಏನ್ ಮಾಡಿದರೂ
ಜಪವೊಂದೆ ಫೋನೆಲ್ಲಿ
ನಡೆಯುತ್ತಿರುವ ಕೆಲಸ ನಿಂತರೂ
ಹೊಸ ಮಾಹಿತಿ ಏನ್ ಬಂತಿಲ್ಲಿ

Dpಯನ್ನು ಬದಲಿಸದಿದ್ದರೆ
Bp ಇಲ್ಲ ಕಂಟ್ರೋಲಲ್ಲಿ
Statusಅನ್ನು ತಿದ್ದದೆ ಇದ್ದರೆ
Stability no ಮನದಲ್ಲಿ

ಕಳಿಸಿದ msgಗೆ likes ಬರದಿದ್ದರೆ
ದಿನವೆಲ್ಲಾನು ಚಡಪಡಿಕೆ
ರಾಶಿ likes ಬಂದುದ ಕಂಡರೆ
ಹತ್ತಿರುವೆ ತೆಂಗಿನ ಮರಕೆ

ಬಂದ ಮಾಹಿತಿಗೆ comment ಮಾಡಲು
ತಕ್ಷಣ ಕೈಬೆರಳೋಡಲು
ಯಾರೂ ನೀಡದ complement ಕೊಡಲು
ಉದುರುತ್ತಿದೆ ತಲೆಗೂದಲು

Drugsನ್ನಾದರೂ ಬಿಡಬಹುದೇನೋ
Picsನೋಡದೆ ನಾ ಇರಲಾರೆನೋ
ದಮ್ಮಯ್ಯ ಪರಿಹಾರ ನೀಡುತ್ತೀರೇನೋ
ಕಾಯುತ್ತಿರುವೆ ನಾ ಬೇಗ ಕಳಿಸಿರಣ್ಣೋ


Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -