ಕವನ - ಮಹಿಳಾ ದಿನ



ಶತಮಾನಗಳ ತುಳಿತ
ಸಹಿಸಿ ಸಹಿಸಿ
ಕಟ್ಟೆಯೊಡೆಯಿತೊಂದಿನ

ಬಾಗಿ ಬಾಗಿ ಬೆನ್ನು
ಮುರಿದೇ ಹೋಗುವ ಹೊತ್ತಲ್ಲಿ 
ಸೆಟೆದು ನಿಂತಿತಾದಿನ

ಮಾಡಿ ಮಾಡಿ ಸವೆದ
ಕೈಗಳು ಹೋರಾಟಕಾಗಿ 
ಜೋಡಿಸಿಕೊಂಡಿತದೇ ದಿನ

ನಾನೂ ಸಮಾನಳೆಂದು
ಅಬ್ಬರಿಸುತ
ಸೆಡ್ಡು ಹೊಡೆದಾ.. ವೀರದಿನ

ದಶದಿಕ್ಕಿನಲಿ
ಧ್ವನಿತಗೊಂಡ
ವಿಜಯಕಹಳೆಯೂದಿದ ದಿನ

ಎರಡೇನು
ಸಾಸಿರ ಜಡೆಗಳು
ಭದ್ರಕೋಟೆ ಹೆಣೆದುಕೊಂಡ
ಮಹಾ ದಿನ 
ಮಹಿಳಾದಿನ


Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -