ಕವನ - ಮದುಮಗಳು
ಅವಳುಡುವ
ಸೀರೆಯೂ ನಿಮ್ಮಾಯ್ಕೆಯೇ...
ಅದ್ಯಾವ
ಮಹಾ ಬಿಡಿ
ಅವಳ
ಸಂಗಾತಿಯೇ ನಿಮ್ಮಾಯ್ಕೆಯಾಗಿರುವಾಗ
ಅವಳೇ
ಒಂದು ಮೊಗ್ಗು
ಮಣಭಾರದ
ಮೊಗ್ಗಿನ ಜಡೆ ಯಾಕೆ
ಕತ್ತನಲುಗಾಡಿಸದಿರಲು
ಇಂದಿನಿಂದಲೇ
......ಅಭ್ಯಾಸವೆ
ಮುದ್ದಾದ
ಮೂಗನು ಚುಚ್ಚಿ
ಗಾಯಮಾಡಿದರೇನೆ
ಅಂದವೆ
ಅವಳ
ನರಳಿಕೆಯಲ್ಲೆ ನಿಮಗಾನಂದವೆ
ಅವಳ
ಕಾಲುಂಗುರ
ಮುನ್ನುಗ್ಗಲು
ತಯಾರಾದಾಗ
'ನಿಲ್ಲು' ಎನ್ನುವ ಕರೆಗಂಟೆಯೇ
ಕೈ
ಸೋತರೂ
ಗಂಡನ ಕಿವಿ ಇಂಪು ಮಾಡಲು ಡಜ಼ನು ಬಳೆ
ಕೈರೇಖೆಗಳನೇ
ಬದಲಾಯಿಸಿದವು
ಆ
ಮದರಂಗಿಯ ಕಲೆ
ನಿದ್ದೆಯನೊದ್ದವು
ಆ ನೇಮಗಳು
ಬೆನ್ನೇರಿ
ಬಾರಿಸಿದವು ಈ ಪೂಜೆಗಳು
ಸುಸ್ತು
ಮಾಡಿದವೆಲ್ಲ ಶಾಸ್ತ್ರಗಳು
ಇನ್ನು
ಆ ತಾಳಿಯೋ.....
ಚಿರನಿದ್ರೆಯ
ಕುಣಿಕೆಯೂ ಅಲ್ಲ
ಎತ್ತುವ ಬಾವಿಹಗ್ಗವೂ ಅಲ್ಲ
ತನ್ನವರ
ದೂರ ಮಾಡುವ ಗಡಿದಾರ
ಚಿಂತೆಗಳನೆ
ತುಂಬಿಸುವ ಎದೆಭಾರ
ತಾನು
ಪರರ ಸ್ವತ್ತು .... ಬಲುಘೋರ
ಮುಖವಾಡವೆ
ಇನ್ನು ಬದುಕಪೂರ

Comments
Post a Comment