ಕವನ - ರಂಗಮ್ಮ




ರಂಗಮ್ಮ
ಅಮ್ಮ ಅಲ್ಲ
ಮಗುವಾಗಬಯಸುವಳು
ಅವಳೊಂದು ಕೂಸು

ಅಕ್ಕ ಅಂತ ಕರೆದರೆ
ತಂಗಿಯಾಗಲೇ ಎನುವಳು
ಅವಳು ಆರೈಕೆಯ ದಾಯಿ

ಆಕೆ ಹಾಡುವುದಿಲ್ಲ
ಹಾಡಿಗೆ ಸಾಹಿತ್ಯವೇ ಅವಳು
ಅವಳೊಂದು ಮಧುರ ಗೀತೆ

ಹೆಚ್ಚಿಗೆ ಓದಿದ ಪದವಿಗಳಿಲ್ಲ
ಅದ್ಯಾತಕೆ
ಅವಳೊಂದು ಉನ್ನತ ವಿಷಯ

ಪ್ರೀತಿಗೆ ಹಸಿದವಳು
ಮಾಡಿಕೊಟ್ಟರೆ ಸಾಲದಂತೆ
ತಿನಿಸಿ ಮಲಗಿಸಬೇಕಂತೆ
ಅವಳೊಂದು ಅಚ್ಚರಿ

ಅವಳು ಕಡಲು.... ಅದರ ಆಳ ತಿಳಿಯದು
ಅವಳು ಮುಗಿಲು..... ಅನಂತ ಅಳೆಯಲಾಗದು
ನಾವು ಕೂತು ಜೋಡಿಸಿ ಪೋಣಿಸಿ ಬರೆದರೆ ಅದು ಕವನವಾದೀತು
ಆದರೆ ಆಕಿ ಮಾತಾಡಿರೆ ಸಾಕು
ಅದೊಂದು ಪದ್ಯಕಾವ್ಯ

 - ಉಷಾಗಂಗೆ 


Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -