ಕವನ - ಗಣಪತಿರಾಯ ಕೇಳಯ್ಯ



ಗಣಪತಿರಾಯ ಇಲ್ಲಿ ಕೇಳಯ್ಯ
ಏನನ್ಯಾಯ ಬಲು ದೌರ್ಜನ್ಯ

ಹಗ್ಗವ ಹಿಡಿದು ದಾರಿಗೆ ಅಡ್ಡ
ಧೈರ್ಯದಿ ಕೀಳ್ವರು ಎಲ್ಲರ ದುಡ್ಡ

ನಿನ್ನಯ ಜಪಿಸುತ ಹೊರಗಡೆ ಭಕ್ತಿ
ನಿನ್ನೆದುರಿನಲೇ ಮೋಜಿನ ಮಸ್ತಿ

ವಿರಹದ ಕುಡಿತದ ಐಟಂ ಸಾಂಗಿಗೆ
ಕುಣಿವರು ಅನಿಸದೆ ಸ್ವಲ್ಪವೂ ನಾಚಿಕೆ

ಸಾವಿರ ರೊಕ್ಕ ನೀರಿನ ಪಾಲು
ಇವರಿಗೆ ಕೇಳದು ರೈತರ ಗೋಳು

ತಿಲಕರ ಆಶಯ ಒಗ್ಗಟ್ಟು
ಸಂದಿಗೊಂದಿಗೂ ಗಣಪತಿ ಇಟ್ಟು
ದೂರಾದರಲ್ಲ ಬೇರ್ಪಟ್ಟು

ಕೊನೆಯಲೊಂದು ಕಿವಿಮಾತು
ತಿಲಕರು ಈಗ ಬದುಕಿಲ್ಲ
ಮಣ್ಣಿನ ಗಣಪತಿ ಮಾತಾಡಲ್ಲ
ಹಣ ಕೊಡುವ ನಾವು ಪ್ರಶ್ನಿಸುವುದಿಲ್ಲ
ಇವರು ಆಡಿದ್ದೆ ಆಟವಾಯಿತಲ್ಲ


Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -