ಕವನ - ಮಿಸ್




ನಿಮ್ಮ ಮೊಗದ ನಗು ಮಾಸದಿರಲಿ
ಅದು ಹಲವು ದುಗುಡಗಳಿಗೆ ಸಾಂತ್ವನ

ನಿಮ್ಮ ನಡೆ ನಿಲ್ಲದಿರಲಿ
ಅದು ನಮ್ಮ ನಿಲುಗಡೆಗೆ ಹಸಿರು ನಿಶಾನ

ನಿಮ್ಮ ಸದ್ದು ಅಡಗದಿರಲಿ
ಕುಕ್ಕುತಿನ್ನುವ ಕೆಟ್ಟ ಮೌನಕೆ ಬಿರುಸು ಬಾಣ

ನಿಮ್ಮ ಪ್ರೀತಿ ಕಡಿಮೆಯಾಗದಿರಲಿ
ಕಂಗೆಟ್ಟ  ಬರನಾಡಲಿ ಅದು ಸಂಜೀವನ

ನನಗಾಗಿ
ನಿಮ್ಮ ಮನದಲೊಂದು ಸಣ್ಣ ಕೋಣೆಯಿರಲಿ
ಎನಗಾಗಿ
ತಲೆಯಿಟ್ಟು ಮಲಗಲು  ತೊಡೆತೊಟ್ಟಿಲು ಮೀಸಲಿರಲಿ

ಅವು... ನಾ  ಹೆಮ್ಮೆಪಡುವ  ನನ ಸುಂದರ ಜೀವನ


Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -