ಕವನ - ಸ್ಕಂದಗಿರಿಯ ತುದಿಯೇರಿ



ಸ್ಕಂದಗಿರಿಯ ತುದಿಯೇರಿದ ಮೇಲೆ
ಮೂಡಿಸಿದೆವು ವಿಜಯ ಚಿತ್ರಮಾಲೆ
ಬಾನು ಭುವಿಯ ಮಧ್ಯೆ ಮೋಹಕ ಮುಗಿಲಬಲೆ

ರವಿಯೇರುವಾಗ ರಂಗೇರಿತು ಮೂಡಣನೆಲೆ
ಬೆಳಕಿನ ವಿಧವಿಧ ಕುಸುರಿನಕಲೆ
ಈಗಲೂ ನೆಲೆಸಿದೆ ನಯನದಲೆ

ಅಲ್ಲಿ ಅನಿಸಿಸುದೇನೆಂದರೆ

ಅದು ಏನೇ ಇರಲಿ
ಬಯಸಿರಿ ಬದುಕಲಿ
ಕನಸಿರಿ  ಕಣ್ಣಲಿ

ಮುಂದೊಂದು ದಿನ ಬರುವುದು
ಕಡುಕತ್ತಲಲೂ ದಾರಿ ಕಾಣುವುದು
ಕಟ್ಟಡವಿಯಲೂ ಆಸರೆ ಸಿಗುವುದು

ಕಲ್ಲು ಮುಳ್ಳು ಹಾನಿಮಾಡದು
ಏರು ಜಾರುಗಳು ಎತ್ತಿ ಹಿಡಿವುದು
ಕೊರೆಚಳಿಯೂ ಬಳಿಸಾರದು

ಅಂತಿಮವಾಗಿ
ಗುರಿಯ ಗಿರಿಯು ನಿನ್ನ ಕಾಲಕೆಳಗಿರುವುದು
ಬಯಸಿದ್ದು ದೊರಕಿ ಮನವು ಕುಣಿಯುವುದು

Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -