ಕವನ - ಯಾವ ಮಾಸದಾಸೆ ನಿಮಗೆ



ಜುಪಿಟರನು ತಿಳಿಯ ಬಯಸಿದ
ಮನುಜನಾಸೆ ಯಾವ ಮಾಸಕೆಂದು
ದೂತನೊಬ್ಬನ ಕಳಿಸಿದ
ಸರಿಸಮೀಕ್ಷೆ ನಡೆಸಿದ

ಜಲಗಿರಣಿಯ ಮಾಲೀಕ
ಮಳೆಬಯಸಿದ ಗಾಳಿರಹಿತ
ಗಾಳಿಗಿರಣಿಯ ಒಡೆಯ
ಜೋರುಗಾಳಿ ಮಳೆರಹಿತ

ಬೇಡನು ಬೇಡಿಕೆ ಇಟ್ಟ
ಮಂಜಿರದ ಬಹುಬಿಸಿಲು
ಶಾಲಾ ಬಾಲಕನ ಇಷ್ಟ
ಹಿಮಮಾಸದಲ್ಲಿ ಆಡಲು

ಬದಲಿಕೆಗೆ ಮುಂದೆಣಿಸಿ
ಕೈಬಿಟ್ಟ ಎಲ್ಲರಾಶೆ ಪರಿಗಣಿಸಿ
ಎಲ್ಲ ಮಾಸಕೂ ಅವಕಾಶಿಸಿ
ಮೊದಲಿನಂತೆ ಮುಂದುವರೆಸಿ
ನಿರುಮ್ಮುಳನಾದನು

 (ಆಂಗ್ಲ ಸಾಹಿತ್ಯದ ನಾಟಕವೊಂದರ ಕಥೆ ) 

Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -