ಕವನ - ಹಿಡಿ ಅನ್ನ
ಹಿಡಿ
ಅನ್ನಕೆ -
ರೈತನ
ಬೆವರು
ಸಾಲದ
ಕಣ್ಣೀರು
ಪಣಕಿಡುವರು
ಹಿಡಿ
ಅಕ್ಕಿಗೆ
ತುಂಬಿದ
ಜನರು
ಕೊಬ್ಬಿದ
ಪೊಗರು
ಬಿಸಾಡುವರು
ಕಸದ
ಬುಟ್ಟಿಗೆ
ಅಪ್ಪನ
ಶ್ರಮ
ಅಮ್ಮನ
ಪ್ರೇಮ
ಕಲೆತ
ಹಿಡಿ
ಅನ್ನಕೆ
ಥೂ...ಉಪ್ಪಿಲ್ಲ
ಸಾರಿಗೆ
ರುಚಿಯಿಲ್ಲ
ದೂರುತ
ಕಲಗಚ್ಚಿಗೆ
ಒಂದು
ದಿನದ ಪ್ರಮಾದಕ್ಕೆ
ಉಂಟು
ಪರಿಹಾರ
ಪ್ರತಿದಿನದ
ಪ್ರದರ್ಶನಕ್ಕೆ
ಮಹಾ
ಧಿಕ್ಕಾರ
ಉಳಿದನ್ನ
ವಿಷವಲ್ಲ
ಉಂಡರೆ
ಅದು ಕೀಳಲ್ಲ
ತುತ್ತು
ಅನ್ನ ಬಿಸಾಡುವಾಗ
ಅಮ್ಮನ
ಕೈತುತ್ತೆಂದು
ಮಿಕ್ಕ
ಅನ್ನ ಚೆಲ್ಲುವಾಗ
ಅನ್ನದಾತನ
ರಕ್ತವೆಂದು
ನೆನೆದರೆ
ಈ ಛಾಳಿ
ಸರಿಹೋಗಬಹುದೆಂದು
ಭಾವಿಸುತಿರುವೆ
ಇಂದು
Comments
Post a Comment