ಕವನ - ಕಲಿಕೆ



ಹುಲ್ಲಗರಿಕೆ ಏನನುತಿಹುದು
"ನೋಡೆನ್ನ ನಮನೀಯತೆ 
ಬೀಸಿದಂತೆ ಬಾಗೆನುತಿಹುದು"

ಹಿರಿಹೆಮ್ಮರ ಏಕಿಹುದು
 "ಕಲಿ ನನ್ನ ಸಹನಶೀಲತೆ 
ಬೆಳೆದು ನೀಡು ಅನುತಿಹುದು"

ಸಣ್ಣಿರುವೆಯು ಇಲ್ಲಿಹುದು
"ನೋಡು ನನ್ನ ಕಾರ್ಯಕ್ಷಮತೆ
ಕೀಳರಿಮೆ ಬೇಡೆನುತಿಹುದು"

ಉಲಿವ ಮುದ್ದುಪಕ್ಕಿಇಹುದು
"ವಾಗ್ಮಿಗಿಲ್ಲ ಆಪತ್ತಿನ ವ್ಯಥೆ
ನುಡಿನಡೆ ಸಮವಿರಲೆನುತಿಹುದು"

ಕಲ್ಲುಶಿಲೆಯು ಯಾಕಿಹುದು
"ಎಲ್ಲಪೆಟ್ಟು ಮೆಲ್ಲ ಸಹಿಸುತೆ
ಶಿಲ್ಪಕಲೆಯಾಗರಳೆನುತಿಹುದು"

ಎಲ್ಲೆಡೆ ಮಣ್ಣರಡಿಹುದು
"ಸರ್ವ ಫಸಲ ಉತ್ಪನ್ನತೆ
ಹೊನ್ನಗಣಿಯೆ ಹೊಂದಿರುತೆ
ಅಡಿಇರುವೆ ಮೆರೆಯೆನಾನು
ಅರಿಯೆ ಇದನು ಎನುತಿಹುದು"


Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -