ಕವನ - ಅಮ್ಮ ಕೈಗೆ ಸಿಗುತ್ತಿಲ್ಲ
ಅಮ್ಮ
ಬಲು
ನಿಷ್ಠೆ
ಪೂಜೇಲಿ
ಮಗಳಿಗೆ
ನಂಬಿಕೆಯಿಲ್ಲ
ಅವುಗಳಲಿ
ಆ ದಿನ
ಈ ದಿನ
ಮಾಂಸ
ಸಲ್ಲ
ಅಮ್ಮನ
ಬೋಧ
ಅದು
ಅರ್ಥಹೀನ
ಅದಿರದೆ
ನಾನಿಲ್ಲ
ಇವಳ
ವಾದ
ತಿಂದರೆ
ಅಮ್ಮನ
ಸಿಡಿಮಿಡಿಕೆ
ತಿಂದಿರದಿರೆ
ಇವಳ
ಚಡಪಡಿಕೆ
ಹೀಗೊಂದು
ದಿನ
ಮನೆಗೆ
ಅಳಿಯ ಪ್ರಾಣಿಯ
ಆಗಮನ
ಅದಕ್ಕೂ, ಮಸಾಲೆಗೆ ನಾಲಿಗೆ
ಕಿತ್ತುಕೊಳ್ಳುವ ಗುಣ
ಏನಾಶ್ಚರ್ಯ
ಅಮ್ಮ
ಗಪ್ ಚುಪ್
ಈಗ ಆ
ಅಮ್ಮ
ಮಗಳ
ಕೈಗೆ ಸಿಗುತ್ತಿಲ್ಲ
Comments
Post a Comment