ಕವನ - ಮನುಜನಾಗು ಕಂದ
ಗರ್ಭದಾಗುಡಿಯಿಂದ
ಮೆಲ್ಲಹೊರಬಂದ
ಹೆದರದಿರು
ಕಂದ
ತಾಯಿ
ಮಡಿಲಿಹುದು
ಹಾಯಿ
ಸುಖವಿಹುದು
ತುಂಬಿದ
ಮನೆಯಿಂದ
ತೆವಳುತಾ
ಬಂದ
ಅಳುಕದಿರು
ಕಂದ
ನೆಲದ
ಒಲವಿಹುದು
ಹಿಡಿದು
ನಡೆಸುವುದು
ಐದು
ತುಂಬಿದರಿಂದ
ನಿನಗು
ಸಾಲೆಗು ಬಂಧ
ಬೆದರದಿರು
ಕಂದ
ಗುರುವೃಂದವಿಹುದು
ಅರಿವು
ನೀಡುವುದು
ಓದು
ಮುಗಿದುದರಿಂದ
ಓಡು
ಸತ್ಯದ ಹಿಂದ
ಜಗವ
ತಿಳಿ ಕಂದ
ಮೌನ
ತಾರೆಗಳಿಹವು
ಏರು
ಪರ್ವತಗಳಿಹವು
ಪಡೆದೆ
ನೀ ಲೋಕದಿಂ
ಅರಿತೆ
ನೀ ಜನರಿಂ
ಬಿದ್ದೆ
ನೀ ಬೆಳೆದೆ ನೀ
ಎಲ್ಲ
ಎಲ್ಲದರಿಂ
ಮರಳಿ
ನೀಡು
ಮರೆಯದಿರು
ಮನುಜನಾಗು
ಮೃಗವೆನಿಸದಿರು
Comments
Post a Comment