ಕವನ - ಸುಬ್ಬಿ ಸುಬ್ಬಿ ಸುಬ್ಬಕ್ಕ
ಸುಬ್ಬಿ
ಸುಬ್ಬಿ ಸುಬ್ಬಕ್ಕ
ಸೀ
ಮಾತಿನ ಮಲ್ಲಕ್ಕ
ಏನ
ಮಾಡುವೆ ಚಿಟ್ಟಕ್ಕ
ಓಡಿ
ಬಾರೆ ಪುಟ್ಟಕ್ಕ
ತೊಡೆಯನೇರುತ
ಮೆಲ್ಲತುಳಿಯುತ
ಅರಳೆಯ
ತೋಳಲಿ
ಕೊರಳನು
ಬಳಸುತ
ಮುತ್ತನು
ನೀಡೆ ನನ್ನ ಅಪ್ಪುತ
ಹತ್ತಿರ
ಬಾರೆ ಪುಟ್ಟಕ್ಕ
ಉಣ್ಣಲು
ಮಾಡದೆ ರಂಪಾಟ
ಉಂಡರೆ
ಕೊಡುವೆ ಗಾಳಿಪಟ
ಉಪ್ಪಿನ
ಮೂಟೆ ಮಣ್ಣಿನ ಕೋಟೆ
ಆಡುವ
ಬಾರೆ ಅಚ್ಚಕ್ಕ
ನೆತ್ತಿಗೆ
ಬೆರಳಿನ ಕೋಡು ಸಿಕ್ಕಿಸಿ
ಢಿ ಢಿ
ಢಿಕ್ಕಿ ಮೆತ್ತನೆ ಬಾರಿಸಿ
ಅವ್ವಾಲಕ್ಕಿ
ಸಾರಿಸಿ ಗುಡಿಸಿ
ನಿನಗಿಷ್ಟವಲ್ಲವೆ
ನನ್ನಕ್ಕ
ದೂರಿ
ದೂರಿ ನಿನ್ನ ತೂಗಿಸಿ
ಚಿಮಣಿ
ಕತ್ತಲ ಗುಮ್ಮನ ತೋರಿಸಿ
ಅಮ್ಮನ
ಸೀರೆಯ ಜೋಳಿಗೆ ಪೇರಿಸಿ
ಪಾಚಲು
ಬಾರೆ ಬುಜ್ಜಕ್ಕ
- ಉಷಾಗಂಗೆ

Comments
Post a Comment