ಕವನ - ಕಲೆಯ ಬೆಳೆ




ಎಲ್ಲರೊಳಗೂ
ಒಂದೊಂದು ಕಲೆ
....ಬೀಜದೊಳಗಿನ
ಜೀವದಂತೆ

ಸಿಗಬೇಕು ಆರಿಸಿ
ಪೋಷಿಸುವ ಸೆಲೆ
....ಕೃಷಿ ಅರಿತ
ಋಷಿಯಂತೆ

ಆಗ ಮೂಡುವ
ವಿಶ್ವಾಸದ ಅಲೆ
....ನೂಕಿ ತಳೆದ
ಮೊಳಕೆಯಂತೆ

ಹೊರಹೊಮ್ಮಿ
ಬೆಳೆಯುವ ಬೆಳೆ
....ಸೊಂಪಾದ
ಸಸಿಯಂತೆ

ಪರಿಪೂರ್ಣ ಕಲೆಯ
ಅಂತಿಮ ನೆಲೆ
....ಕಳಿತ ಹಣ್ಣಿನಲ್ಲಿ
ಪರಿಪಕ್ವ ರುಚಿಯಂತೆ

ಸ್ವಾದಿಸಿ ಸೂಸುವ
ಸಂತಸದ ಬೆಲೆ
....ಕಲೆಗೂ ಕೃಷಿಕನಿಗೂ
ಸಲ್ಲುವ ಗೌರವದಂತೆ

Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -