ಕವನ - ಕಿಟಕಿ ಹಕ್ಕಿ




ಕಿಟಕಿ ಕನ್ನಡಿಗೆ
ಕುಟ್ಟಿ ಹಕ್ಕಿಯೊಂದು
ನಿತ್ಯ ಬರುವುದು

ತನ್ನ ಪ್ರತಿಬಿಂಬಕೆ
ಮೋಸಗೊಂಡು
ಕದನ ನಡೆಸುವುದು

ಕುಟುಕುತ ಹಾರುತ
ನೆಗೆಯುತ ಕೂಗುತ
ಆಟವಾಡುವುದು

ಪುಟ್ಟ ಬಾಲ ಬಡಿಯುತ್ತ
ಚಿಟ್ಟಿ ತಲೆ ತಿರುಪುತ್ತ
ಪಿಳಿಪಿಳಿ ಕಣ್ಣು ಹೊಡೆಯುತ್ತ

ಪ್ರತಿದಿನದ ಈ ಮಾಟ
ಭಲೆ ಮಜದ ನೋಟ
ಮನಸ್ಸಿಗೆ ಸಂತಸ ಕೂಟ

ಮುಗ್ಧ ಮೂಕ ಹಕ್ಕಿಗೆ
ಆಸೆಯೇ ಇಲ್ಲ ಬುದ್ಧಿಗೆ
ಕಾಣುತ್ತಿರುವುದೇ ನಿಜವೆಂದು
ಅದರ ಅನಿಸಿಕೆ

ಇದೇ ಕಾರಣ ಅದರ ನಗುವಿಗೆ
ಕಾಣುವುದು ಬಿಟ್ಟು ಇರದುದಕ್ಕೆ
ಕಂಡರೂ ಅದನ್ನು ತರ್ಕಕ್ಕೆ
ಒಳಪಡಿಸಿ ತಲೆಕೆಡಿಸಿಕೊಳ್ಳುವೆವು
ಬುದ್ಧಿ ಇಲ್ಲ ನಮಗೆ


Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -