ಕವನ - ಸ್ಕಂದಗಿರಿ ಚಾರಣ



ಹತ್ತಿದೆವು ಹತ್ತಿದೆವು
ಕತ್ತಲಲ್ಲಿ ಹತ್ತಿದೆವು
ಭಯವನೆಲ್ಲ ತೂರಿಬಿಟ್ಟು
ತುದಿಯೇರುವ ಆಸೆಹೊತ್ತು

ಹಿರಿಯಕಿರಿಯರೊಡಗೂಡಿ
ಗಿಡಗಂಟಿಗಳ ಪಕ್ಕದೂಡಿ
ಒರಟುದಾರಿ ಬಳಸುದಾರಿ
ಲೆಕ್ಕಿಸದೆ ಏರನೇರಿ

ಆಯಾಸವ ಬೇಸರವ
ನೀಗಲಿಕ್ಕೆ ಕಾಲೆಳೆಯುತ
ಇಳಿಜಾರಲಿ ಕಡಿದಾದಲ್ಲಿ
ಪರಸ್ಪರ ಕೈನೀಡುತ

ಮುಂಜಾವಿನ ಮಬ್ಬಿನಲಿ
ಚಂದ್ರಚುಕ್ಕಿ ಜೊತೆಯಾಗಿ
ಕಣಿವೆಗಳ ತೊಟ್ಟಿಲಲ್ಲಿ
ಬೆಳ್ಮುಗಿಲು ಇನ್ನುಮಲಗಿ

ನಿಂತುಸಾಗಿ ಕುಂತುಸಾಗಿ
ಗಿರಿನೆತ್ತಿಯ ಕಡೆ ನುಗ್ಗಿ
ಕೊನೆತಲುಪಿ ಹರುಷವುಕ್ಕಿ
ತ್ರಾಸವೆಲ್ಲ ಮಾಯವಾಗಿ

ನಾವ್ ಕಂಡುದು ನಿಜವೇನ
ಸುತ್ತ ಹಣೆದಮೇಘಜಾಲ
ನಟ್ಟನಡುವೆ ನಮ್ಮತಾಣ
ಮಾತೆಹೊರಳಲಿಲ್ಲವಲ್ಲ

ಮೆಲ್ಲ ಮೆಲ್ಲ ಪಡುವಣದಲಿ
ತಿಳಿಬೆಳಕು ಬೆಳಗಿ ಬೆಳಗಿ
ಮೇಘವರ್ಣ ಬರುಬರುತಲಿ
ಊದ ಶ್ವೇತ ರಜತವಾಗಿ

ದಿವ್ಯಲೋಕದೃಶ್ಯವೆಲ್ಲ
ಕಣ್ಣತುಂಬಿಕೊಳುವಾಗಲೇ
ಮೆಲ್ಲ ಮೆಲ್ಲ ಕಂಡುಬಂದ
ರವಿಯಣ್ಣನು ಎದುರಲೇ

ನವುರಾದ ಮುಗಿಲಹೊದಿಕೆ
ಬಿಟ್ಟುಏಳಲಾಗದೆ ಅವ
ಮಂಕಾಗಿ ಮಸುಕಾಗಿ
ಸ್ವಲ್ಪ ಸ್ವಲ್ಪ ಏಳಲಾಗಿ

ಆಹೊತ್ತಲಿ ನಮ್ಮನಲ್ಲಿ
ಕಂಡು ನಾಚಿಕೆಂಪಗಾಗಿ
ಮರೆಮಾಚುತ ಕಾರ್ಯದಲಿ
ಎಂದಿನಂತೆ ನಿರತನಾಗಿ

ಶಾಖಮೂಡಿ ಬೆಚ್ಚಗಾಗಿ
ನವಚೇತನವಂತರಾಗಿ
ಸ್ತಬ್ಧಕ್ಷೀರಸಾಗರವ
ದಿಟ್ಟಿಸುತಲೇ ಮೂಕರಾಗಿ

ಅಲ್ಲೇ ಆಗಲೇ
ಚಾರಣವಿಜಯಭಾಗಿದಾರರೆಲ್ಲರಿಗೂ
ಮನದಲೇ ಸ್ಮರಿಸಲಾಗಿ...🙏🏼

ಕೊನೆಯದಾಗಿ

ಗಿರಿಪರ್ವತ ಚಾರಣವಾಗಬೇಕು
ಸ್ಪೂರ್ತಿಯ ಹೂರಣ
ಅಜಾಗ್ರತೆ ಅನೈತಿಕತೆಯಾದರೆ
ಅದರ ಫಲಿತಾಂಶ...ಮರಣ

ಕವನದಲ್ಲಿ ಮುಖ್ಯವಾದವರನ್ನೆ ಮರೆತೆ

ಶ್ವಾನಗಳೆರಡು ಗೆಳೆಯರಾಗಿ
ಜೊತೆಗೆ ಇದ್ದವು ದಾರಿ ತೋರುತ
ಅವುಗಳ ಕಂಡೆ ಧೈರ್ಯವಾಗಿ
ಆತಂಕ ಮರೆತು ಮುಂದಕೆ ಹೋಗುತ
ಬಿಸ್ಕತ್ ರಸ್ಕ ಬನ್ನು ಕೊಟ್ಟು 
ಕೃತಜ್ಞತೆ ಸಲಿಸಿದೆವು

Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -