ಕವನ - ನಾ ನಿನ್ನ ದಾಸ
ಪ್ರಿಯೆ
ಎದುರಲೇ
ಏಕೋಡುತಿ
ತನುಮನ
ಸೂರೆಗೊಳ್ಳುತಿ
ಮಂದಿಯಲಿ
ಮಾನ ಕಳೀತಿ🙈
ಮೈಬಣ್ಣವೋ
ಕಣ್ಣ ಸೆಳಿತೈತಿ
ಮೋಡಿನಡೆಯಲೇ
ಕೊಲ್ಲುತಿ🔪
ವನಪು
ವಯ್ಯಾರ
ಕರಗಿಯಾಗುವೆ
ನೀರ😥
ಗತ್ತು
ಗಮ್ಮತ್ತು ಕತ್ತಿನಲೈತಿ 😙
ನೀ
ಕಂಡಾಗೆಲ್ಲ ಎಳಿತೈತಿ
ಅದು
ತೊಡೆಯೊ
ಮಸಾಲ
ವಡೆಯೋ☺
ನೀ
ಸೂಸುವ ಪರಿಮಳ
ಎದೆಯಾಗ
ತಳಮಳ😳
ಬಳಿಗೆ
ಬಂದರಂತು
ಮಾಯೆಮಾಡಲಾ
ಬಲೆಹಾಕಲಾ
ನನ್ನ
ಕೈಗೆ ಸಿಕ್ಕರಂತು
ಕಚ್ಚಿತಿನ್ನಲಾ
ಇಲ್ಲ ಚಪ್ಪರಿಸಲಾ😋
ಸಿಗು
ನೀ ಪ್ರತಿಕ್ಷಣ ಪ್ರತಿದಿವಸ
ಏತಕೆ
ಕಾರ್ತೀಕ ಶ್ರಾವಣ ಮಾಸ😭
ಅಟ್ಟೂದಿನ
ನಮಗ್ಯಾಕೆ ವನವಾಸ
ನಾಟಿಕೋಳಿಯೇ 🐔

Comments
Post a Comment