ಕವನ - ದುಷ್ಟರ ನೆತ್ತರ ಕೋಡಿ
ಅಲ್ಲಿ
ಮೇರು
ಗಿರಿಧಾಮವು ನಿಂತಿತ್ತು
ಬಹು
ಆಳ ಕಮರಿಯ ತಗ್ಗಿತ್ತು
ಜೋರಲಿ
ವಾಹಿನಿ ಹರಿದಿತ್ತು
ಧೋ
ಎನೆ ಮಳೆಯು ಸುರಿದಿತ್ತು
ದಾರಿಯೇ
ಬಿಡದ ದಟ್ಟಕಾನನದಿ
ಖಗ
ಮಿಗ ತರುಮರ ಹಬ್ಬಿತ್ತು
ಈ
ಸಿರಿ ಎಂದಿಗೂ ಬಳುಕಲೆ ಇಲ್ಲ
ಮೇಲು
ಕೀಳೆಂದು ಉಬ್ಬಲೂ ಇಲ್ಲ
ಅರಸಿದ
ಬಯಸಿದ ಮಾನವಕೋಟಿಗೆ
ಕೊಡುವುದನೆಂದಿಗೂ ಮರೆಯಲೆ
ಇಲ್ಲ
ಏನು
ಕೊಡದವ ಕೇವಲ ಪಡೆವವ
ಮಾಡಿದ
ಜಾತಿಯ, ತುಚ್ಛನೀತಿಯ
ತುಳಿಯುತ
ಕೆಲವರ ಬಳಸುತ ಹಲವರ
ನಾವೆ
ದೊಡ್ಡವರೆನ್ನುತ ಕುಣಿವರ
ಮಲೆಯೂ
ಹೆದರಿತು ಮಾನುಷ ಕೃತ್ಯಕೆ
ಕಣ್ಣೀರಾಯಿತು
ದುಡಿವರ ಕಷ್ಟಕೆ
ನೋಡುತ
ಸಹಿಸದೆ ಆ ಸಹ್ಯಾದ್ರಿಯು
ಮಲೆಗಿರಿ
ಮಕ್ಕಳನೆಬ್ಬಿಸಿ ನಂಬಿಸಿ
ಹಿಮ್ಮೆಟ್ಟದೆ
ಕಾದಾಡಿರೆ
ಹುಲಿಯೂ
ಬಗ್ಗುವುದೆನ್ನುವ
ಪಾಠವ ಕಲಿಸಿ
ಹಾರಿಸಿ
ಕೆಂಪನೆ ರೆಕ್ಕೆಯ ಹಕ್ಕಿ
ಕೈಯಿಗೆ
ಕೋವಿಯ ಆಯುಧವಿಕ್ಕಿ
ಕೊಬ್ಬಿದ
ಜನರ ಕೊಬ್ಬನು ಸೀಳುತ
ಅದನೆ ಸಿಡಿಯುವ ಮದ್ದಿಗೆ ತಿಕ್ಕಿ
ಕಾಡಲಿ
ಕ್ರಾಂತಿಯು ಕೆರಳಿತು ನೋಡಿ
ಹರಿಯಿತು
ದುಷ್ಟರ ನೆತ್ತರ ಕೋಡಿ
- ಉಷಾಗಂಗೆ
Comments
Post a Comment