ಕವನ - ಬಣ್ಣಕ್ಕೂ ಇಟ್ಟರೆ....? ಕುಮ್ಮಕ್ಕು



ಅಂಧ ದ್ವೇಷದ ವೈಖರಿ ನೋಡಿ
ಪ್ರಾಣಿ ಹರಾಜು ನಡೀತಿದೆ ಹೊಡೆದಾಡಿ
ಆಕಳು ಹಿಂದುಗಳ ಪಕ್ಷ
ಅಜವು ಇಸ್ಲಾಮರ ಸಮಕ್ಷ

ಮಂದಿರದಲ್ಲಿ ಹಿಂದುಗಳು
ಮಸೀದಿಯಲ್ಲಿ ಮುಸ್ಲಿಮರು
ಆಗಿರುತ್ತಿದ್ದ ಕಾಲ ಹೋಗಿ
ಭಾರತ ಹರಿದು ಇಬ್ಭಾಗವಾಗಿ
ಮನುಷ್ಯರೇ ಇಲ್ಲದಂತಾಗಿ

ಅವರು ನಾರಿಫಲಕ್ಕೂ
ಇವರೂ ಖರ್ಜೂರಕ್ಕೂ 
ಮುಗಿಬಿದ್ದುದ ಕಂಡು
ಈಗ ಚಿಂತೆಯಾಗಿದೆ 
ಮರ ಎಲೆ ಕಡ್ಡಿ ಗಳಿಗೂ
ನಮ್ಮ ಸರದಿಯೆಂದು? ...ಎಂದು

ಈ ವರಸೆ ಎಲ್ಲಿವರೆಗೂ ಅಂದರೆ
ಬಣ್ಣಗಳಿಗೂ ಬಂತು ತೊಂದರೆ
ಹಸಿರಾಯಿತು ಮುಸಲ್ಮಾನ
ಹಿಂದು ಬಳಿದುಕೊಂಡ ಕೇಸರೀನ

ಆ ದಿನ ದೂರದಲ್ಲೆಲ್ಲೂ ಇಲ್ಲ
ಇಸ್ಲಾಂಪರ ಹಸಿ ತರಕಾರಿಯೆಲ್ಲ
ಬರೀ ಟಮೋಟ ಬಿಟ್ಟರೆ ಗಜ್ಜರಿ
ಹಿಂದುಗಳ ಹಿಸ್ಸೆಗೆ ಉಳಿಯುವುದಲ್ಲ

ಖರೆ ಮೇಲಿನದೆಲ್ಲ
ಆದ್ರೆ ಒಂದು ಹೊಳೀತಿಲ್ಲ
ಪಪ್ಪಾಯಕಲ್ಲಂಗಡಿ
ಸೇರಬೇಕು ಯಾರ ಗಡಿ?
ಈ ಬಡಪಾಯಿಯೋ ಹೊರಗೆ ಮುಸಲ್ಮಾನ
ಒಳಗೆ ಒಬ್ಬ ಹಿಂದು ಇದ್ದಾನ......

ಇವರು ಗೋಮಾಂಸದ ಪಾರ್ಟಿ ಮಾಡುವರಂತೆ
ಅವರು ಮಸೀದಿ ಮುಂದೆ ಹಂದಿ ಸಮಾರಾಧನೆಯಂತೆ
ಅಲ್ಲೆಲ್ಲೊ ಒಲೆಯೇ ಉರಿಯದ ಮನೆಗಳಿವೆಯಂತೆ
ಇಲ್ಲಿ ಬಾಯಿ ಬಡಕೊಳ್ಳುವವರು
ಅಲ್ಲಿ  ಈ ಖಾದ್ಯ ಬಡಿಸಿ ಬಂದರೆ ಪುಣ್ಯವಂತೆ
ತ್ವರೆಮಾಡಿ


Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -