ಕವನ - ಆ ಕೈಲ್ಲಿದೆ ಸಂಜೀವಿನಿ
ಆ
ಕೈಲ್ಲಿದೆ ಸಂಜೀವಿನಿ
ಮುಟ್ಟಿದೆಡೆಯೆಲ್ಲ
ಹಸಿರುಚಿಗುರಿಸುವ
ಮಾಯಾವಿನಿ
ಅಂಗೈಅಗಲವಿರಲಿ
ವಿಶಾಲನೆಲವಿರಲಿ
ನೆಡಲೇಬೇಕು
ಗಿಡವ
ಇಡಲೆಬೇಕು
ಹೂಕುಂಡವ
ಒಡೆದ
ಬಕೀಟು ಮುರಿದ ಬಿಂದಿಗೆ
ಹರಿದ
ಚೀಲ ಸೋರುವ ಮಡಕೆ
ಎಲ್ಲಕೂ
ಸಸಿ,ಮಣ್ಣು ತಂದು
ನೀರುಣಿಸಿದರೇನೆ
ನೆಮ್ಮದಿ ಅಂದು
ನೋಡು
ನೋಡುತಲೇ
ಮನೆಮುಂದೆ
ನೆರೆಮನೆ ಹಿಂದೆ
ಖಾಲಿ
ಸೈಟಿನಲೂ ರಸ್ತೆ ಪಕ್ಕದಲೂ
ಮಹಡಿ
ಮೇಲೂ ಬಾಲ್ಕನಿಯಲ್ಲೂ
ದಾಸವಾಳ
ಕರ್ಣಕುಂಡಲ
ತುಳಸಿ
ಮರುಗ ದೊಡ್ಡಪತ್ರೆ
ಕೊಂಡಮಲ್ಲಿ
ಗುಂಡುಮಲ್ಲಿ
ಬ್ರಹ್ಮಕಮಲ ಪನ್ನೀರುಪತ್ರೆ
ಶೋಹೂವಿನ
ಗಿಡಗಳು
ಕರಬೇವಿನ
ಮರಗಳು
ಸಾಲದಿನ್ನು
ತಂದುಕೊಡೆಂದು
ನನ್ನ
ಬೆಂಬೀಳುವಳು
ಗೇಟಲೇ
ಟಿಕಾಣಿ ಹೂಡಿ
ಕುರಿದನಗಳ
ಮುಟ್ಟಿಸಳು
ಕೀಳುವ
ತುಂಟರ ನೋಡಿ
ಓಡುತಲೇ
ಅಟ್ಟುವಳು
ಮನೆಗೆ
ನೀರಿಲ್ಲದಿದ್ದರೂ
ವನಕೆ
ನೀರೊರುವಳು
ಮನೆಕಸವನೆ
ಮಣ್ಣಿಗೆ ಬೆರೆಸಿ
ಸತ್ವಗೊಳಿಸುವಳು
ರಸ್ತೆಅಗಲಿಸುವವರೆದುರು
ದಿನವಿಡೀ
ಗೋಗರೆದಳು
ಕಣ್ಣಮುಂದೆ
ಮರ ಉರುಳಿದ
ಕಂಡು
ಬಹುಕಾಲ ಕಣ್ಣೀರಿಟ್ಟಳು
ಹಿಂದೊಮ್ಮೆ
ಹೀಗೆ ತೋಟದಲ್ಲೂ
ನೀರಿಲ್ಲದೆ
ಒಣಗಿದ ತನ್ನ
ಗಿಡಮರ
ಮಕ್ಕಳನ್ನ
ಕಂಡು
ಅನ್ನ ಬಿಟ್ಟು ಕರುಬಿದ್ದಳು
ಎಲ್ಲೋ
ಕೇಳಿದ್ದು
ತನ್ನ
ಬಗ್ಗೆ ಮಾತ್ರ ಚಿಂತಿಸುವವ
ನಾಯಿ
ಮರಿ ಸಾಕುವನೆಂದು
ಇತರರ
ಕುರಿತು ಚಿಂತಿಸುವವ
ಗಿಡ
ಮರ ಬೆಳೆಸುವನೆಂದು
ಅದು
ನಮ್ಮಜ್ಜಿಯೇ
Comments
Post a Comment