ಕವನ - ದೀಪಾವಳಿ
ದೀಪಾವಳಿ
ದೀಪಗಳ
ಪ್ರಭಾವಳಿ
ಬೇಡ
ಪಟಾಕಿಗಳ ಹಾವಳಿ
ಹೂಗಳ
ಪರಿಮಳ ಪಸರಿಸಲಿ
ಕಜ್ಜಾಯದ
ಘಮಲು ತುಂಬಲಿ
ಪಟಾಕಿ
ಮದ್ದಿನ ವಾಸನೆ...ತಪ್ಪಲಿ
ತಳಿರು
ತೋರಣ ಚಂದ
ಸುಂದರ
ರಂಗೋಲಿ ಅಂದ
ಪಟಾಕಿ
ಕಸ ಕೆಡಿಸುವುದು ಮನೆ ಅಂದ ಚಂದ
ಅರಿಯಲಿ
ಮಕ್ಕಳು
ಅವರಿಷ್ಟ
ಪಡುವ ಪ್ರಾಣಿ ಪಕ್ಷಿಗಳ ಅಳಲು
ಕೊಲ್ಲುತ್ತಿರುವುವು
ಭಾರಿ ಶಬ್ಧಗಳು
ಕಾಸು
ಎಣಿಸಿ ಪಟಾಕಿಯಲ್ಲ
ಕೊಳ್ಳುತಿಹೆವು
ಪಣಕಿಡುತಿಹೆವು
ಜೀವಸಂಕುಲವನ್ನೆಲ್ಲ
ಕನಿಷ್ಠವೆಂದರೆ
ಸುರಬತ್ತಿ, ಹೂಕುಂಡ
ಡಂ ಡಂ
ಬೇಡ ಬರೀ ದಂಡ
ಪಟಾಕಿ
ಎಲ್ಲ ರೀತಿಯಲೂ ನಷ್ಟದ ಹೊಂಡ


Comments
Post a Comment